ಸಾಮಾನ್ಯವಾಗಿ CT ಸ್ಕ್ಯಾನ್ ಅನ್ನು ಮನುಷ್ಯರಿಗೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪ್ರಾಣಿಯೊಂದು ಸಿಟಿ ಸ್ಕ್ಯಾನ್‌ಗೆ ಆಗಮಿಸಿತ್ತು. ಮನುಷ್ಯರಿಗಾಗಿಯೇ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಆಮೆಯೊಂದಕ್ಕೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ವೈದ್ಯರು ಇದನ್ನು ಪ್ರತಿದಿನ ಪರಿಶೀಲಿಸುತ್ತಿದ್ದಾರೆ. ಆಮೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ.
CT ಸ್ಕ್ಯಾನ್‌ಗೆ ಒಳಗಾದ ವಿಶ್ವದ ಮೊದಲ ಪ್ರಾಣಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಆಮೆಯ ಹೆಸರು ಕೆಲ್. ಈ ಆಮೆ 2019ರಿಂದ ಕುಕ್ ಮ್ಯೂಸಿಯಂ ಆಫ್ ನ್ಯಾಚುರಲ್ ಸೈನ್ಸ್‌ನಲ್ಲಿ ವಾಸಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಸಮುದ್ರವು ಅದರ ನೆಲೆಯಾಗಿತ್ತು, ಆದರೆ ಒಮ್ಮೆ ಮೀನುಗಾರಿಕೆಯ ಕೊಕ್ಕೆಗೆ ಸಿಕ್ಕಿಹಾಕಿಕೊಂಡಿದ್ದರಿಂದ ಆಮೆಯ ಶೆಲ್ ತೀವ್ರವಾಗಿ ಗಾಯಗೊಂಡಿತ್ತು. ನಂತರ ಆಮೆಯನ್ನು ಬದುಕಿಸಿ ಕುಕ್ ಮ್ಯೂಸಿಯಂ ಆಫ್ ನ್ಯಾಚುರಲ್ ಸೈನ್ಸ್‌ಗೆ ತರಲಾಯಿತು. ಅಂದಿನಿಂದಲೂ ಕೆಲ್ ಇಲ್ಲೇ ನೆಲೆಸಿದೆ.
ಗಾಯಗೊಂಡಿರೋ ಆಮೆಯ ಚಿಪ್ಪಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅದು ನೀರಿಗೆ ಹೋದಾಗ ಅನಾರೋಗ್ಯಕ್ಕೆ ಒಳಗಾಗಬಹುದು ಎನ್ನುತ್ತಾರೆ ವೈದ್ಯರು. ಇದೇ ಕಾರಣಕ್ಕೆ ಸೋಂಕನ್ನು ಪತ್ತೆಹಚ್ಚಲು ಕೆಲ್ ಎಂಬ ಈ ಆಮೆಗೆ CT ಸ್ಕ್ಯಾನ್ ಮಾಡಲಾಗಿದೆ. ಆಮೆಯ ಆರೈಕೆಗಾಗಿ ಮತ್ತು ಅದರ ಚಿಪ್ಪಿನ ಸೋಂಕನ್ನು ತೆಗೆದುಹಾಕಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಟಿ ಸ್ಕ್ಯಾನ್ ಮೂಲಕ ವೈದ್ಯರು ಆಮೆಯ ಸೋಂಕನ್ನು ನಿರ್ಣಯಿಸಿದ್ದಾರೆ. ಕೆಲ್ ಈಗಾಗ್ಲೇ ಸಾಕಷ್ಟು ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ದೀರ್ಘಕಾಲ ಮ್ಯೂಸಿಯಂನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿನ ಸಿಬ್ಬಂದಿಯೊಂದಿಗೆ ಬೆರೆತಿದೆ. ಕೆಲ್ ಶೀಘ್ರದಲ್ಲೇ ಚೇತರಿಸಿಕೊಂಡು ಸಮುದ್ರಕ್ಕೆ ಮರಳಬಹುದು ಅನ್ನೋದು ವೈದ್ಯರ ಆಶಯ. ಕುಕ್ ಮ್ಯೂಸಿಯಂ ಆಫ್ ನ್ಯಾಚುರಲ್ ಸೈನ್ಸ್ ಇತ್ತೀಚೆಗೆ ಆಮೆಯ ಸಿಟಿ ಸ್ಕ್ಯಾನ್ ಮತ್ತು ಚಿಕಿತ್ಸೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.