ಇದೇನು ಆಸ್ಪತ್ರೆಯೋ ? ಕೊಟ್ಟಿಗೆಯೋ ? ಐಸಿಯುನಲ್ಲಿ ಹಸು ತಿರುಗಾಡಿದ ವಿಡಿಯೋ ವೈರಲ್ 20-11-2022 8:05AM IST / No Comments / Posted In: Latest News, India, Live News ಆಸ್ಪತ್ರೆಗೆ ರೋಗಿಗಳು ಬರೋದಷ್ಟೇ ಅಲ್ಲ, ಹಸು ಕೂಡ ಬಂದಿದೆ. ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹಸು ಬಂದಿತ್ತು. ಆಸ್ಪತ್ರೆ ಆವರಣದಲ್ಲಿದ್ದ ಕಸದ ತೊಟ್ಟಿಗಳಲ್ಲಿರುವ ವೈದ್ಯಕೀಯ ತ್ಯಾಜ್ಯವನ್ನು ಹಸು ತಿಂದು ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡುಬಂತು. ಆಸ್ಪತ್ರೆಯಲ್ಲಿ ದಿನವಿಡೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಹಸುವನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲು ಯಾರೂ ಇರಲಿಲ್ಲ. ಆಸ್ಪತ್ರೆಯಲ್ಲಿ ಇಬ್ಬರು ಹಸು ಹಿಡಿಯುವವರನ್ನು ನೇಮಿಸಲಾಗಿದೆ ಆದರೆ ಘಟನೆ ನಡೆದಾಗ ಅವರೂ ಇರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಓರ್ವ ಸೆಕ್ಯೂರಿಟಿ ಗಾರ್ಡ್ ಮತ್ತು ಇತರ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಭುರಾಮ್ ಚೌಧರಿ ಅವರು ಆರಂಭದಲ್ಲಿ ಅಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಆದರೆ ವಿಡಿಯೋ ವೈರಲ್ ಆದ ನಂತರ ಮೂವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. मध्य प्रदेश के राजगढ़ में अस्पताल के ICU वार्ड में गाय घुस गई। pic.twitter.com/ffHMkbwoYS — Priya singh (@priyarajputlive) November 19, 2022