ಚಂಡೀಗಢ: ದಶಕಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ ಪಂಜಾಬ್ ನ ಬಟಿಂಡಾದ ಹಳ್ಳಿಯೊಂದರ ರೋಷನ್ ಸಿಂಗ್ ಎಂಬ ವ್ಯಕ್ತಿ ಬರೋಬ್ಬರಿ 34 ವರ್ಷಗಳ ನಂತರ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. 2.5 ಕೋಟಿ ರೂ.ಗಳ ಬಂಪರ್ ಲಾಟರಿ ದಕ್ಕಿಸಿಕೊಂಡಿದ್ದಾನೆ.
ರೋಷನ್ ಸಿಂಗ್ 1988 ರಿಂದ ನಿರಂತರವಾಗಿ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ರೋಷನ್ ಅವರು ಬಟ್ಟೆ ಅಂಗಡಿಯನ್ನು 1987 ರಿಂದ ನಡೆಸಿಕೊಂಡು ಬರುತ್ತಿದ್ದಾರೆ. 18 ವರ್ಷಗಳ ನಂತರ ಬೇರೆ ಮಾಲೀಕರ ಅಡಿಯಲ್ಲಿ ಕೆಲಸ ಮಾಡಿದ ನಂತರ, ಅವರು ತಮ್ಮದೇ ಆದ ಅಂಗಡಿಯನ್ನು ತೆರೆದಿದ್ದಾರೆ.
ಆದರೆ, ಅವರು ಬಯಸಿದಂತೆ ಖರ್ಚು ಮಾಡಬಹುದಾದ ಮೊತ್ತವನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸುಲಭದಲ್ಲಿ ದುಡ್ಡು ಮಾಡುವ ದಾರಿಯನ್ನು ಹುಡುಕಲು ಪ್ರಾರಂಭಿಸಿದ ಅವರು, ಲಾಟರಿ ಟಿಕೆಟ್ ಅನ್ನು ನಿರಂತರವಾಗಿ ಖರೀದಿಸಲು ಶುರು ಮಾಡಿದ್ದಾರೆ.
ಆದರೆ, ನಿರಂತರವಾಗಿ ಲಾಟರಿ ಟಿಕೆಟ್ ಖರೀದಿಸುವುದನ್ನು ರೋಷನ್ ಪತ್ನಿ ವಿರೋಧಿಸಿದ್ದರು. ತನ್ನ ಪತಿ ಪ್ರತಿ ಬಾರಿ ಸೋತಾಗಲೂ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಚಟದಿಂದ ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ, ಅವರು ಖರೀದಿಸುವ ಚಟದಿಂದ ಹಿಂದೆ ಬೀಳಲಿಲ್ಲ.
ಅಂತಿಮವಾಗಿ, ಅವರು ಇತ್ತೀಚೆಗೆ 2.5 ಕೋಟಿ ರೂ.ನ ಬಂಪರ್ ಲಾಟರಿ ಗೆದ್ದಿದ್ದಾರೆ. ಪಂಜಾಬ್ ಸ್ಟೇಟ್ ಡಿಯರ್ ಬೈಸಾಖಿ ಬಂಪರ್ ಲಾಟರಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ.
ಬಂಪರ್ ಲಾಟರಿ ಗೆದ್ದ ಖುಶಿಯಲ್ಲಿರುವ ಅವರು, ತಾನು ಒಂದಲ್ಲ ಒಂದು ದಿನ ಗೆಲ್ಲುವುದಾಗಿ ಭರವಸೆ ಹೊಂದಿದ್ದೆ. ಕನಿಷ್ಠ 10 ಲಕ್ಷ ರೂ.ಗಳಾದ್ರೂ ಪಡೆದುಕೊಳ್ಳುವ ನಿರೀಕ್ಷೆಯನ್ನು ಹೊಂದಿದ್ದಾಗಿ ರೋಶನ್ ತಿಳಿಸಿದ್ದಾರೆ.
ತೆರಿಗೆಯಲ್ಲಿ ಕಡಿತವಾಗಿ 1.7 ಕೋಟಿ ರೂ. ಮೊತ್ತ ಇವರಿಗೆ ಲಭಿಸಿದೆ. ರೋಷನ್ ತನ್ನ ಮೂವರು ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡಲು ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಲಾಟರಿಯಿಂದ ಬಂದಂತಹ ಹಣವನ್ನು ವಿನಿಯೋಗಿಸಲು ಯೋಜಿಸಿದ್ದಾರೆ.