ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಗಿದ್ದೇ ಆಗಿದ್ದು, ವಿಡಿಯೋಗಳದ್ದೇ ಕಾರುಬಾರು. ಪ್ರತಿ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಕೆಲವು ವಿಡಿಯೋಗಳು ಭಯಂಕರ ಆಗಿದ್ದರೆ, ಇನ್ನೂ ಕೆಲವು ವಿಚಿತ್ರ ಅನಿಸೋ ಹಾಗಿರುತ್ತೆ. ಆದರೂ ಆ ರೀತಿಯ ವಿಡಿಯೋಗಳು ವೈರಲ್ ಆಗ್ತಿರುತ್ತೆ.
ಇನ್ನೂ ಇದೇ ಇಂಟರ್ನೆಟ್ ಜಗತ್ತಿನಲ್ಲಿ ಆಗಾಗ ಫ್ಯಾಂಟಸಿ ಪ್ರಪಂಚ, ಮೊಬೈಲ್ ಮೂಲಕ ಅನಾವರಣ ಆಗುತ್ತಲೇ ಇರುತ್ತೆ. ಈಗ, ಇತ್ತೀಚೆಗೆ ಮತ್ತೆ ಅಂತಹದ್ದೇ ಒಂದು ವಿಡಿಯೋ ಒಂದು ವೈರಲ್ ಆಗಿದೆ. ಸ್ವಿಟ್ಜರ್ಲೆಂಡ್ನಲ್ಲಿ ಜಿಂಕೆಗಳ ಹಿಂಡು ಪಾರದರ್ಶಕ ರೀತಿಯಲ್ಲಿ ಕಾಣಿಸುವ ನೀರಲ್ಲಿ ನಡೆದಾಡುತ್ತಾ ಮೋಜು ಮಾಡುವ ವಿಡಿಯೋ ವೈರಲ್ ಆಗಿದೆ.
ಹಲವಾರು ಜಿಂಕೆಗಳು ಹಚ್ಚ ಹಸಿರಿನ ನಡುವೆ ಸ್ಪಷ್ಟವಾದ ನೀರನ್ನು ಶಾಂತವಾಗಿ ಆನಂದಿಸುತ್ತಿರುವುದನ್ನು ತೋರಿಸುವ ಈ ದೃಶ್ಯ, ಡಿಸ್ನಿ ಚಲನಚಿತ್ರ ಇದ್ದಕ್ಕಿದ್ದಂತೆ ಜೀವ ಪಡೆದಂತೆ ಭಾಸವಾಗುತ್ತದೆ.
ಟ್ವಿಟರ್ನಲ್ಲಿ ಬ್ಯುಟೆಂಗೆಬೀಡೆನ್ ಪೋಸ್ಟ್ ಮಾಡಿದ ಈ ವೀಡಿಯೊ 5,78,000 ವೀಕ್ಷಣೆಗಳನ್ನು ಪಡೆದಿದ್ದು, ಹಲವಾರು ಭಿನ್ನ ಭಿನ್ನ ಬಗೆಯ ಕಾಮೆಂಟ್ಗಳನ್ನು ಪಡೆದಿವೆ. ಸಾಮಾನ್ಯವಾಗಿ ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ ವಿವರಿಸುವಂತಿದೆ ಈ ವೀಡಿಯೊ.
ಈ ವಿಡಿಯೋ 3ಡಿ ಎಫೆಕ್ಟ್ ನಂತಿದೆ ಎಂದು ಓರ್ವ ನೆಟ್ಟಿಗ ಕಾಮೆಂಟ್ ಹಾಕಿದರೆ ಇನ್ನೋರ್ವ ಇದು ಕಾಲ್ಪನಿಕವಾಗಿರುವುದು ಎಂದು ಹೇಳಿದ್ದಾರೆ. ಇನ್ನೊಬ್ಬರಂತೂ ಚಿತ್ರಕ್ಕೊಂದು ಮರುಜೀವ ಕೊಟ್ಟ ಹಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಇದು ಯಾವುದೋ ಸ್ಪೆಷಲ್ ಎಫೆಕ್ಟ್, ಇಲ್ಲಾ ಎನಿಮೇಶನ್ ಇಲ್ಲದೇ ಇರುವಂತ ಚಿತ್ರವಾಗಿದೆ. ಇದೊಂದು ನೈಜ ದೃಶ್ಯ.
https://twitter.com/buitengebieden/status/1576160103719632896?ref_src=twsrc%5Etfw%7Ctwcamp%5Etweetembed%7Ctwterm%5E1576160103719632896%7Ctwgr%5E1976bd66280d790e3e432cfb15337b714e8492b3%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ffantasy-world-video-of-herd-of-deer-enjoying-clear-water-leaves-internet-mesmerised-3396010