ಜೀವನದಲ್ಲಿ ಏರುಪೇರು ಸಾಮಾನ್ಯ. ಇದು ಮನುಷ್ಯನ ಕರ್ಮ ಹಾಗೂ ಅದೃಷ್ಟವನ್ನು ಅವಲಂಬಿಸಿದೆ. ಅದೃಷ್ಟ ಒಲಿದಾಗ ಸಂಪತ್ತು, ಪ್ರಗತಿ, ಸಂತೋಷ ಪ್ರಾಪ್ತಿಯಾಗುತ್ತದೆ. ಅದೃಷ್ಟ ಕೈಕೊಟ್ಟಾಗ ಸಮಸ್ಯೆ, ಅನಾರೋಗ್ಯ ಕಾಡಲು ಶುರುವಾಗುತ್ತದೆ. ಮನೆಗೆ ಲಕ್ಷ್ಮಿ ಪ್ರವೇಶ ಮಾಡುವ ಮೊದಲು ಕೆಲವು ಸಂಕೇತಗಳನ್ನು ನೀಡ್ತಾಳೆ. ಕನಸಿನಲ್ಲಿ ಕೆಲ ವಸ್ತುಗಳು ಕಾಣುವುದನ್ನು ಲಕ್ಷ್ಮಿ ಆಗಮನದ ಸಂಕೇತ ಎನ್ನಲಾಗುತ್ತದೆ.
ಕನಸಿನಲ್ಲಿ ಹಾವು ಕಾಣುವುದು ಸಾಮಾನ್ಯ. ಆದ್ರೆ ಬಿಲದಲ್ಲಿ ಹಾವು ಕಾಣಿಸಿಕೊಂಡರೆ ಶುಭಕರವೆಂದು ನಂಬಲಾಗಿದೆ. ಇದು ಆರ್ಥಿಕ ವೃದ್ಧಿಯ ಸಂಕೇತವಾಗಿದೆ.
ಕನಸಿನಲ್ಲಿ ಚಿನ್ನ ಕಂಡರೆ, ತಾಯಿ ಲಕ್ಷ್ಮಿ ದಯೆ ತೋರುತ್ತಾಳೆ ಎಂಬುದು ಸ್ಪಷ್ಟವಾಗುತ್ತದೆ.
ಕನಸಿನಲ್ಲಿ ಜೇನುಗೂಡು ಕಾಣಿಸಿಕೊಂಡರೆ ಶುಭಕರ ಎನ್ನಲಾಗುತ್ತದೆ. ಇದು ಲಕ್ಷ್ಮಿ ಒಲಿದ ಸಂಕೇತವನ್ನು ನೀಡುತ್ತದೆ. ಶೀಘ್ರವೇ ಧನಾಗಮನವಾಗಲಿದೆ ಎಂಬುದರ ಸಂಕೇತವಾಗಿದೆ.
ಕನಸಿನಲ್ಲಿ ಇಲಿ ಕಾಣಿಸಿದ್ರೆ, ಮನೆಗೆ ಸಂಪತ್ತು ಬರಲಿದೆ ಎಂಬ ಸೂಚನೆ. ಭೌತಿಕ ಸಂತೋಷಕ್ಕೆ ಇನ್ಮುಂದೆ ಕೊರತೆಯಾಗುವುದಿಲ್ಲ ಎಂದರ್ಥ.
ದೇವರನ್ನು ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ಯಶಸ್ಸು ಲಭಿಸಲು ಕಾರಣವಾಗುತ್ತದೆ.
ದೀಪ ಸ್ವಪ್ನದಲ್ಲಿ ಕಂಡರೆ, ಅಪಾರ ಸಂಪತ್ತು ಮನೆಗೆ ಬರಲಿದೆ ಎಂದರ್ಥ. ಕನಸನ್ನು ಶುಭವೆನ್ನಲಾಗುತ್ತದೆ.
ಕನಸಿನಲ್ಲಿ ಉಂಗುರ ಧರಿಸಿದಂತೆ ಕಂಡರೆ ಜೀವನದ ಸಮೃದ್ಧಿಯ ಸಂಕೇತವಾಗಿದೆ. ಹುಡುಗಿಗೆ ಈ ಕನಸು ಬಿದ್ದಲ್ಲಿ, ಆಕೆಗೆ ಶೀಘ್ರವೇ ಕಂಕಣಬಲ ಕೂಡಿ ಬರಲಿದೆ.