alex Certify ಇತಿಹಾಸವನ್ನು ನೆನಪಿಸುವ ʼಶಾಸನಗಳ ತವರುʼ ಲಕ್ಕುಂಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸವನ್ನು ನೆನಪಿಸುವ ʼಶಾಸನಗಳ ತವರುʼ ಲಕ್ಕುಂಡಿ

ಗದಗದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಲಕ್ಕುಂಡಿ ಶಾಸನಗಳ ತವರು ಎಂದೇ ಪ್ರಖ್ಯಾತವಾಗಿದೆ. ಪುಟ್ಟ ಊರಿನಲ್ಲಿ ಒಂದು ಕಾಲದಲ್ಲಿ ನೂರಾರು ದೇವಾಲಯಗಳು ಇದ್ದವು. ಶಾಸನಗಳು ಗತವೈಭವದ ಮೇಲೆ ಬೆಳಕನ್ನು ಚೆಲ್ಲುತ್ತವೆ.

ನಂದರು, ಮೌರ್ಯರು, ಶಾತವಾಹನರು, ಕದಂಬರು ಸೇರಿದಂತೆ ಹಲವು ರಾಜಮನೆತನಗಳ ಆಳ್ವಿಕೆಯಲ್ಲಿ ಲಕ್ಕುಂಡಿ ಪ್ರಮುಖ ಸ್ಥಳವಾಗಿತ್ತು. ಇಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಜಿನ ಭವನ ಸ್ಥಾಪಿಸಿದ್ದರು. ಈ ಸ್ಥಳದಲ್ಲಿ 12 ಜಿನಾಲಯಗಳು ಇದ್ದವು.

ಒಂದು ಕಾಲದಲ್ಲಿ 101 ದೇವಾಲಯ ಮತ್ತು 101 ಬಾವಿಗಳು ಇಲ್ಲಿದ್ದವು. ಕಾಲಕ್ರಮೇಣ ಅವೆಲ್ಲಾ ಇಲ್ಲವಾಗಿವೆ. ಲಕ್ಕುಂಡಿ ಉತ್ಸವದ ಸಂದರ್ಭದಲ್ಲಿ ಇತಿಹಾಸವನ್ನು ನೆನಪಿಸಿಕೊಳ್ಳಲಾಗುತ್ತದೆ.

ಅಂದಹಾಗೇ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯಲ್ಲಿ ಟಂಕಸಾಲೆ ಇತ್ತು. ಚಿನ್ನದ ನಾಣ್ಯಗಳನ್ನು ಟಂಕಿಸಲಾಗುತ್ತಿತ್ತು. ಈ ಹಿಂದೆ ಮಳೆಗಾಲದಲ್ಲಿ ಲಕ್ಕುಂಡಿಯಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿದ್ದವು. ಜಿನಾಲಯ, ಕಾಶಿ ವಿಶ್ವನಾಥ ದೇವಾಲಯ ಪ್ರಮುಖವಾದವು.

ವಿಶ್ವನಾಥನ ದೇಗುಲ ಕಲ್ಯಾಣಿ ಚಾಲುಕ್ಯರ ಶಿಲ್ಪಕಲೆಯ ವೈಭವವನ್ನು ತಿಳಿಸುತ್ತದೆ. ಆಕರ್ಷಕ ದೇವಾಲಯದಲ್ಲಿ ಇಮ್ಮಡಿ ತೈಲಪನ ಶಾಸನಗಳಿವೆ.

ಇಲ್ಲಿರುವ ಸೋಪಾನ ಬಾವಿಗಳು ವಿಶೇಷವಾಗಿವೆ. ಆಯತಾಕಾರದಲ್ಲಿರುವ ಹೊಂಡಗಳು ಕೆಳಭಾಗದಿಂದ ಮೇಲಿನವರೆಗೆ ವಿಶೇಷವಾಗಿ ನಿರ್ಮಾಣವಾಗಿವೆ. ಸುತ್ತಲೂ ಮೆಟ್ಟಿಲು, ಮೇಲಿನ ಮಂಟಪಗಳು ಆಕರ್ಷಕವಾಗಿವೆ.

ಪ್ರವಾಸಿಗರಿಗೆ, ಅಧ್ಯಯನಕಾರರಿಗೆ ಲಕ್ಕುಂಡಿ ಉತ್ತಮ ಸ್ಥಳವಾಗಿದೆ. ಗದಗದ ಸುತ್ತಮುತ್ತ ಇನ್ನೂ ಹಲವಾರು ನೋಡಬಹುದಾದ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...