ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ತೂಕ ಇಳಿಸಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ವ್ಯಾಯಾಮದ ಜೊತೆಗೆ ಆಹಾರದಲ್ಲೂ ಕಟ್ಟುನಿಟ್ಟು ಇದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು ಬಹಳ ಸುಲಭ. ಅದರಲ್ಲೂ ವಿಶೇಷವಾಗಿ ಬೆಳಗಿನ ಉಪಹಾರಕ್ಕೆ ಸೇವಿಸುವ ಆಹಾರಗಳ ಬಗ್ಗೆ ವಿಶೇಷ ಗಮನಹರಿಸಬೇಕು. ತೂಕ ಕಡಿಮೆ ಮಾಡಬಲ್ಲ ಕೆಲವು ಉಪಹಾರದ ಆಯ್ಕೆಗಳು ಇಲ್ಲಿವೆ.
ಮೊಟ್ಟೆಯ ಆಮ್ಲೆಟ್ – ಮೊಟ್ಟೆಯ ಆಮ್ಲೆಟ್ ತೂಕ ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಇದನ್ನು ರೊಟ್ಟಿ, ಬ್ರೆಡ್ ಅಥವಾ ಅನ್ನದೊಂದಿಗೆ ತಿನ್ನಬಹುದು. ಆದರೆ ಆಮ್ಲೆಟ್‌ಗೆ ಹೆಚ್ಚು ಎಣ್ಣೆ ಬಳಸಬೇಡಿ.
ಮೊಸರುಬಜ್ಜಿ ಅಥವಾ ರಾಯತ: ಅನೇಕರು ಮೊಸರು ಮತ್ತು ತರಕಾರಿ ಬೆರೆಸಿದ ಮೊಸರು ಬಜ್ಜಿಯನ್ನು ಇಷ್ಟಪಡುತ್ತಾರೆ. ಇದು ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು. ತೂಕ ಕಡಿಮೆ ಮಾಡಲು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ ಇದರಲ್ಲಿ ಸಮೃದ್ಧವಾಗಿದೆ ಜೊತೆಗೆ ನಾರಿನಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಡುತ್ತದೆ.
ಪಾಲಕ್ ಪನೀರ್ : ತೂಕವನ್ನು ನಿಯಂತ್ರಿಸಲು ಬಯಸಿದರೆ ಪಾಲಕ್ ಪನೀರ್ ಅನ್ನು ತಿನ್ನಬಹುದು. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪ್ರೋಟೀನ್ ಹೊಂದಿದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದರಿಂದಾಗಿ ತೂಕ ನಿಯಂತ್ರಣದಲ್ಲಿರುತ್ತದೆ.
ಮೊಳಕೆ ಕಾಳು : ಪ್ರೋಟೀನ್‌ನ ಮೂಲವಾದ ಬೇಳೆಕಾಳುಗಳಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಹೆಸರು ಕಾಳು ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಕೂಡ ತುಂಬಾ ಸುಲಭ. ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಇಡ್ಲಿ ಸಾಂಬಾರ್ : ದಕ್ಷಿಣ ಭಾರತದ ಆಹಾರಗಳನ್ನು ತಿನ್ನಲು ಬಯಸಿದರೆ ಇಡ್ಲಿ ಸಾಂಬಾರ್ ಉತ್ತಮ ಆಯ್ಕೆ. ಇದು ವೇಗವಾಗಿ ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಆರೋಗ್ಯ ತಜ್ಞರು ಕೂಡ ಇಡ್ಲಿ ಸಾಂಬಾರ್ ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ.