ಇಡ್ಲಿ ದೋಸೆ ಮಾಡಿದಾಗ ಒಮ್ಮೆ ಈ ರೀತಿಯಾಗಿ ಕಡಲೆಬೇಳೆ ಚಟ್ನಿಯನ್ನು ಮಾಡಿ. ಇದು ತಿನ್ನಲು ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
3 ಟೇಬಲ್ ಸ್ಪೂನ್ – ಕಡಲೆಬೇಳೆ, 2 – ಒಣಮೆಣಸು, 1 – ಈರುಳ್ಳಿ, 1 – ಟೊಮೆಟೊ, 1 ½ ಟೀ ಸ್ಪೂನ್ – ಎಣ್ಣೆ, ಚಿಟಿಕೆ – ಇಂಗು, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಅಗತ್ಯಕ್ಕೆ ತಕ್ಕಷ್ಟು, ಒಗ್ಗರಣೆಗೆ – 1/2 ಟೀ ಸ್ಪೂನ್ – ಎಣ್ಣೆ, ½ ಟೀ ಸ್ಪೂನ್ – ಸಾಸಿವೆ, 5 ಎಸಳು – ಕರಿಬೇವು.
ಮೊದಲಿಗೆ ಒಂದು ಪ್ಯಾನ್ ಗೆ 1 ಟೀ ಸ್ಪೂನ್ ಎಣ್ಣೆ ಹಾಕಿ ಕಡಲೆಬೇಳೆ ಮೆಣಸು, ಹಾಕಿ ಪರಿಮಳ ಬರುವವರೆಗೆ ಹುರಿದು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ನಂತರ ಇದೇ ಪ್ಯಾನ್ ಗೆ ಈರುಳ್ಳಿ, ಟೊಮೆಟೊ ಸೇರಿಸಿ ಫ್ರೈ ಮಾಡಿ. ಟೊಮೆಟೊ ಮೆತ್ತಗಾಗುವವರೆಗೆ ಹುರಿದುಕೊಳ್ಳಿ. ನಂತರ ಟೊಮೆಟೊ ಈರುಳ್ಳಿ, ಕಡಲೆಬೇಳೆ, ಮೆಣಸು ಇವನ್ನೆಲ್ಲಾ ಒಟ್ಟು ಸೇರಿಸಿ ಒಂದು ಮಿಕ್ಸಿ ಜಾರಿಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಅದನ್ನು ಚಟ್ನಿ ಮಿಶ್ರಣಕ್ಕೆ ಸೇರಿಸಿ.