ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ, ರಸ್ತೆ ಮಧ್ಯದಲ್ಲಿ ನಿಂತು ಜಗಳ ಮಾಡುವುದರಲ್ಲಿ ನಮ್ಮವರು ಸದಾ ಮುಂದು. ಆದರೆ ಇತ್ತೀಚೆಗೆ ವೈರಲ್ ಆಗಿರೋ ಆ ಫೋಟೋ ಒಂದು ಶಾಕ್ ಮಾಡುವ ಹಾಗಿದೆ. ಬಿಕಾಸ್ ಇಲ್ಲಿ ಟ್ರಾಫಿಕ್ ಜಾಮ್ ಆದರೂ ಕೂಡಾ ಒಂದೇ ಒಂದು ವಾಹನ ರೂಲ್ಸ್ ಬ್ರೇಕ್ ಮಾಡಿರಲಿಲ್ಲ.
ಇದು ಭಾರತದ ಪುಟ್ಟ ರಾಜ್ಯ ಮಿಜೋರಾಮ್‌ನ ರಸ್ತೆಯೊಂದರಲ್ಲಿ ಕಂಡು ಬಂದಿರೋ ದೃಶ್ಯ. ರೈಲ್ವೆಗೇಟ್ ಹಾಕಿದ್ದರಿಂದ ವಾಹನಗಳು ರಸ್ತೆಯಲ್ಲಿ ನಿಂತು ರೈಲ್ವೆ ಗೇಟ್ ಓಪನ್ ಆಗುವುದನ್ನ ಕಾಯ್ತಾ ಇದ್ದರು. ಹಾಗಂತ ಯಾವುದೇ ಒಂದು ವಾಹನ ಕೂಡಾ ಇಲ್ಲಿ ರಾಂಗ್ ಸೈಡಲ್ಲಿ ನಿಂತಿರಲಿಲ್ಲ.
ಟ್ರಾಫಿಕ್ ಜಾಮ್ ಆದಾಗ, ಇಲ್ಲಾ ರೈಲ್ವೆ ಗೇಟ್ ಕ್ಲೋಸ್ ಆದಾಗ ವಾಹನ ಸವಾರರು ನಡು ರಸ್ತೆಯಲ್ಲೇ ನಿಂತು ಬಿಡುತ್ತಾರೆ. ಇದರಿಂದ ಎದುರಗಡೆಯಿಂದ ಬರುವ ವಾಹನಗಳಿಗೆ ಸಮಸ್ಯೆ ಉಂಟಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ವಾಹನ ಹೇಗೆ ಬೇಕೋ ಹಾಗೆ ನಿಲ್ಲಿಸಿಕೊಂಡಿರುತ್ತಾರೆ.
ಆದರೆ ಇಲ್ಲಿರುವ ಯಾವ ಒಂದು ಗಾಡಿಯೂ ರಾಂಗ್ ಸೈಡಲ್ಲಿ ನಿಲ್ಲದೇ, ಮುಂದಿನಿಂದ ಬರುವ ವಾಹನಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಂಡಿದ್ದರು. ನಿಜಕ್ಕೂ ಈ ಒಂದು ಫೋಟೋದಿಂದ ಕಲಿಯಬೇಕಾಗಿರುವುದು ತುಂಬಾ ಇದೆ.