
ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮನೆಯಲ್ಲಿ ಕಳ್ಳತನ ನಡೆದಿದೆ. ಬಂಗಾಳದ ದಕ್ಷಿಣ 24 ಪರಗಣದಲ್ಲಿ ಚಟರ್ಜಿ ಮನೆಯಿದ್ದು, ಜುಲೈ 27ರ ರಾತ್ರಿ ಕಳ್ಳತನವಾಗಿದೆ. ಲಾಕ್ ಮುರಿದು ಒಳನುಗ್ಗಿರುವ ಕಳ್ಳ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ದೊಡ್ಡ ದೊಡ್ಡ ಬ್ಯಾಗ್ಗಳಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾನೆ.
ಈ ಘಟನೆಯನ್ನು ಸ್ಥಳೀಯರು ನೋಡಿದ್ದಾರೆ. ಆದ್ರೆ ಪಾರ್ಥ ಚಟರ್ಜಿ ಮನೆ ಮೇಲೆ ಈ ಹಿಂದೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದರಿಂದ ಇದು ಕೂಡ ಅದೇ ರೀತಿಯ ರೇಡ್ ಎಂದು ಭಾವಿಸಿದ್ದಾರೆ. ಮನೆಗೆ ಕನ್ನ ಹಾಕಿರೋದು ಅವರ ಅರಿವಿಗೆ ಬಂದಿಲ್ಲ.
ಇನ್ನೊಂದೆಡೆ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ಬುಧವಾರ ಮತ್ತೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, 28.90 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಅಪಾರ್ಟ್ಮೆಂಟ್ನಲ್ಲಿದ್ದ 5 ಕೆಜಿ ಚಿನ್ನ ಹಾಗೂ ವಿವಿಧ ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು 21.90 ಕೋಟಿ ನಗದು, 56 ಲಕ್ಷ ವಿದೇಶಿ ಕರೆನ್ಸಿ, 76 ಲಕ್ಷ ಮೌಲ್ಯದ ಚಿನ್ನಾಭರಣ ಸಹ ಪತ್ತೆಯಾಗಿತ್ತು.