2016ರಲ್ಲಿ ತೆರೆಕಂಡಿದ್ದ ‘ಯುಟರ್ನ್’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಇದೀಗ ಅದೇ ಚಿತ್ರದ ಮತ್ತೊಂದು ಭಾಗ ತೆರೆಮೇಲೆ ಬರುತ್ತಿದ್ದು ಇಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಹಾರರ್ ಡ್ರಾಮಾ ಆಧಾರಿತ ಈ ಚಿತ್ರಕ್ಕೆ ಚಂದ್ರು ಓಬಯ್ಯ ಆಕ್ಷನ್ ಕಟ್ ಹೇಳಿದ್ದು, ಆನಂದ್ ಸಂಪಂಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕ ಚಂದ್ರು ಓಬಯ್ಯ ಸೇರಿದಂತೆ ವಿಕ್ಟೋರಿ ವಾಸು, ಪೂಜಾ, ಮಜಾ ಭಾರತ ಮಂಜು, ಉಗ್ರಂ ರವಿ, ಕರಿಸುಬ್ಬು, ರಾಘು ಕಿರಿಕ್ ಪಾರ್ಟಿ ತೆರೆ ಹಂಚಿಕೊಂಡಿದ್ದಾರೆ.
ಯುಟರ್ನ್ ಮೊದಲನೇ ಭಾಗಕ್ಕೆ ಹೋಲಿಸಿದರೆ ಈ ಸಿನಿಮಾ ಬೇರೆ ಶೈಲಿಯಲ್ಲಿದ್ದು ಇನ್ನೇನು ಶೂಟಿಂಗ್ ಮುಕ್ತಾಯ ಹಂತಕ್ಕೆ ತಲುಪಿದೆ ಎಂದು ನಿರ್ದೇಶಕರು ವಾಹಿನಿಯಲ್ಲಿ ತಿಳಿಸಿದ್ದಾರೆ.