
ಈ ಬಾರಿಯ ಐಪಿಎಲ್ ಪಂದ್ಯಗಳು ತುಂಬಾ ರೋಚಕತೆಯಿಂದ ಸಾಗುತ್ತಿದ್ದು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದೆ. ಇಂದಿನ ಪಂದ್ಯದಲ್ಲಿ ಐಪಿಎಲ್ ಪಾಯಿಂಟ್ ಟೇಬಲ್ ನಲ್ಲಿ 9 ಹಾಗೂ 10 ನೇ ಸ್ಥಾನದಲ್ಲಿರುವ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು ಎರಡು ತಂಡಗಳು ಜಯದ ಹುಡುಕಾಟದಲ್ಲಿವೆ.
ಐಪಿಎಲ್ ನ 34ನೇ ಪಂದ್ಯ ಇದಾಗಿದ್ದು, ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಹೈದರಾಬಾದ್ ತಂಡದಲ್ಲಿ ಮಿಂಚಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹಾಗೂ ಮನಿಷ್ಪಾಂಡೆ ಇಂದು ಧೂಳೆಬ್ಬಿಸಲು ಸಜ್ಜಾಗಿದ್ದಾರೆ.