ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ್ ನಡುವಣ ಮೂರು ಏಕದಿನ ಪಂದ್ಯಗಳು ನಡೆಯುತ್ತಿದ್ದು, ಈಗಾಗಲೇ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಅಫ್ಘಾನಿಸ್ತಾನ್ ತಂಡ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈಗಾಗಲೇ ದೊಡ್ಡ ತಂಡಗಳ ವಿರುದ್ಧ ಜಯ ಸಾಧಿಸುವ ಮೂಲಕ ಸಣ್ಣ ಪುಟ್ಟ ತಂಡಗಳು ಐಸಿಸಿ ರ್ಯಾಂಕಿಂಗ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿವೆ.
ಇದೀಗ ಶ್ರೀಲಂಕಾ ತಂಡದ ವಿರುದ್ಧ ಆಫ್ಘಾನಿಸ್ತಾನ್ ಸರಣಿ ಗೆದ್ದರೇ ಇದೊಂದು ದೊಸ ದಾಖಲೆಯಾಗಲಿದೆ. ಬಲಿಷ್ಠ ಬೌಲರ್ ಗಳನ್ನು ಹೊಂದಿರುವ ಆಫ್ಘಾನಿಸ್ತಾನ ತಂಡ ಚಾಂಪಿಯನ್ ತಂಡಗಳ ಬ್ಯಾಟ್ಸ್‌ಮನ್ ಗಳನ್ನೂ ನಡುಗಿಸುವ ಸಾಮರ್ಥ್ಯ ಹೊಂದಿದ್ದಾರೆ.