ವೆಸ್ಟ್ ಇಂಡೀಸ್ ಹಾಗೂ ಯುಎಇ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲೂ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿದ್ದು, ಸ್ವೀಪ್ ಮಾಡಲು ಸಜ್ಜಾಗಿದ್ದಾರೆ.
ಶಾರ್ಜಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಾದರೂ ದೊಡ್ಡ ತಂಡವನ್ನು ಸೋಲಿಸಿ ಸಂಭ್ರಮಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡ ಕಳಪೆ ಪ್ರದರ್ಶನದಿಂದ ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಕೆಳಗಿಳಿದಿದ್ದು, ಐಸಿಸಿ ವರ್ಲ್ಡ್ ಕಪ್ ಕ್ವಾಲಿಫೈಯರ್ ನಲ್ಲಿ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ. ಮತ್ತೊಂದೆಡೆ ಯುಎಇ ತಂಡ ಕೂಡ ಐಸಿಸಿ ವರ್ಲ್ಡ್ ಕ್ವಾಲಿಫೈಯರ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು ಇದೊಂದು ಒಳ್ಳೆಯ ಅಭ್ಯಾಸವಾಗಲಿದೆ.