ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು.
ಖಿನ್ನತೆ ಹಾಗೂ ಒತ್ತಡ ಹೃದ್ರೋಗಕ್ಕೆ ಮೂಲ ಕಾರಣ. ಖಿನ್ನತೆ ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಬಹುದು. ಇದ್ರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ ಗುರಿಯಾಗಿದ್ದರೆ ಹೆಚ್ಚು ಹಣ್ಣುಗಳು ಮತ್ತು ಸಸ್ಯಾಹಾರಿ ಉತ್ಪನ್ನಗಳನ್ನು ಸೇವಿಸಿ. ಧಾನ್ಯಗಳನ್ನು ಆಯ್ದುಕೊಳ್ಳಿ. ಬಿಳಿ ಬದಲಿಗೆ ಕಂದು ಅಕ್ಕಿ ಬಳಸಿ. ಸಂಪೂರ್ಣ ಗೋಧಿ ಪಾಸ್ತಾವನ್ನು ಬಳಸಿ. ಕೋಳಿ, ಮೀನು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಪ್ರೋಟೀನ್‌ಗಳನ್ನು ಸೇವಿಸಿ.
ಸಂಸ್ಕರಿಸಿದ ಆಹಾರಗಳು, ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಿ. ಹೊಟ್ಟೆ ತುಂಬಾ ತಿನ್ನುವ ಬದಲು ಹಸಿವಾದಾಗ ತಿನ್ನುವ ಸೂತ್ರ ಅನುಸರಿಸಿ. ಪ್ರತಿದಿನ ವ್ಯಾಯಾಮ ಮಾಡಿ. ವ್ಯಾಯಾಮದಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ.
ಸ್ನಾಯು ಮತ್ತು ಮೂಳೆಯ ಶಕ್ತಿಯನ್ನು ಹೆಚ್ಚಿಸುವತ್ತ ಹೆಚ್ಚಿನ ಗಮನ ಕೊಡಿ. ವಾರಕ್ಕೊಮ್ಮೆ ಚುರುಕಾದ ವಾಕಿಂಗ್ ಅಥವಾ ನೃತ್ಯದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ನೀವು ಕೆಲಸ ಮಾಡುವ ಮಹಿಳೆಯರಾಗಿದ್ದರೆ ಆಗಾಗ್ಗೆ ನಡೆಯುತ್ತಿರಿ. ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ.
ಎಣ್ಣೆಯಲ್ಲಿ ಕರಿದಂತಹ ವಸ್ತುಗಳಿಂದ ದೂರವಿರಿ. ತೂಕ ಇಳಿಸುವ ಮೂಲಕ ಕ್ಯಾನ್ಸರ್, ಡಯಾಬಿಟಿಸ್ ಮೊದಲಾದ ರೋಗಗಳು ಬರದಂತೆ ಎಚ್ಚರಿಕೆ ವಹಿಸಿ. ದೈಹಿಕ ಕ್ರೀಡೆಗಳಲ್ಲಿ ಸ್ವಲ್ಪ ಸಮಯ ಕಳೆಯಿರಿ.