alex Certify ಇಂದು ವಿಶ್ವ ಎಮೋಜಿ ದಿನ: ನೀವು ಬಳಸುವ ʼಎಮೋಜಿʼಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ವಿಶ್ವ ಎಮೋಜಿ ದಿನ: ನೀವು ಬಳಸುವ ʼಎಮೋಜಿʼಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಅಕ್ಷರಗಳಲ್ಲಿ ಕಳುಹಿಸುವುದು ಮಾತ್ರವಲ್ಲ ಎಮೋಜಿಗಳನ್ನು ಸಹ ಬಳಸಲಾಗುತ್ತಿದೆ. ಬಹುತೇಕರ ದಿನವೂ ಸ್ಮೈಲಿ ಅಥವಾ ಥಂಬ್ಸ್ ಅಪ್‌ನೊಂದಿಗೆ ಶುಭೋದಯ ಸಂದೇಶಗಳಿಗೆ ಪ್ರತ್ಯುತ್ತರ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ.

ಎಮೋಜಿಗಳ ಬಳಕೆ ಇಲ್ಲದೆ ಸಂದೇಶ ಕಳುಹಿಸೋದೇ ಇಲ್ಲವಾಗಿದೆ. ಇದು ಕೂಡ ಇಂದಿನ ದಿನಗಳಲ್ಲಿ ಜೀವನದ ಒಂದು ಭಾಗವಾಗಿಬಿಟ್ಟಿದೆ. ಹೀಗಾಗಿ ಎಮೋಜಿಗೆಂದೇ ಒಂದು ದಿನ ಮೀಸಲಿಡಲಾಗಿದೆ. ಹೌದು, ಜುಲೈ 17, 2014 ರಿಂದ ವಿಶ್ವ ʼಎಮೋಜಿʼ ದಿನವನ್ನಾಗಿ ಆಚರಿಸಲಾಗುತ್ತಿದೆ.

ಎಮೋಜಿ ಅನ್ನೋದು ಎರಡು ಜಪಾನಿ ಪದಗಳ ಮಿಶ್ರಣವಾಗಿದೆ. ಎಮೋಜಿಗಳು ಹೇಗೆ ಮತ್ತು ಯಾವಾಗ ಜನ್ಮ ಪಡೆದವು ಎಂಬುದು ನಿಮಗೆ ಗೊತ್ತೇ ? ಶಿಗೆಟಕಾ ಕುರಿತಾ ಅವರನ್ನು ಎಮೋಜಿಗಳ ಸ್ಥಾಪಕ ಎಂದು ಕರೆಯಲಾಗುತ್ತದೆ. 90ರ ದಶಕದ ಉತ್ತರಾರ್ಧದಲ್ಲಿ ಜಪಾನಿನ ಸೆಲ್ ಫೋನ್ ಕಂಪನಿಯಾದ ಎನ್ ಟಿ ಟಿ ಡೊಕೊಮೊ ಮೊಬೈಲ್ ಫೋನ್‌ಗಳು ಮತ್ತು ಪೇಜರ್‌ಗಳಿಗಾಗಿ 176 ಎಮೋಜಿಗಳ ಸೆಟ್ ಅನ್ನು ಬಿಡುಗಡೆ ಮಾಡಿತು.

ಹೀಗಾಗಿ, ಹೆಚ್ಚಿನ ಎಮೋಜಿಗಳು ಜಪಾನಿ ಅರ್ಥದಿಂದ ಬಂದಿವೆ. ಆದರೆ, ನಮ್ಮಲ್ಲಿ ಕೆಲವರು ಅದನ್ನು ನಮ್ಮದೇ ಆದ ರೀತಿಯಲ್ಲಿ ಮತ್ತು ಅರ್ಥಗಳಲ್ಲಿ ಬಳಸುತ್ತಾರೆ. ಮೂಲತಃ ಜಪಾನಿ ಸಂಸ್ಕೃತಿಯಿಂದ ಹುಟ್ಟಿಕೊಂಡ ಕೆಲವು ಎಮೋಜಿಗಳು ಹಾಗೂ ಅದರ ಅರ್ಥವೇನೆಂದು ಇಲ್ಲಿ ತಿಳಿಯೋಣ.

1. ಎರಡು ಕಣ್ಣನ್ನು ಮುಚ್ಚಿರುವ ಕೋತಿ:

ನಾವು ಹೇಗೆ ಬಳಸುತ್ತೇವೆ: ನಾಚಿಕೆ ಪಟ್ಟ ಸಂದರ್ಭದಲ್ಲಿ ಈ ಎಮೋಜಿಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ.

ಇದರ ಅರ್ಥವೇನು: ನಾನು ಕೆಟ್ಟದ್ದನ್ನು ಕಾಣುವುದಿಲ್ಲ. ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎಂಬ ವಾಕ್ಯದಂತೆ ಈ ಸೀ-ನೋ-ಇವಿಲ್ ಕೋತಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿದೆ.

2. ನೃತ್ಯ ಮಾಡುವ ಹುಡುಗಿಯರು:

ನಾವು ಹೇಗೆ ಬಳಸುತ್ತೇವೆ: ಹುಡುಗಿಯರ ಗುಂಪಿನಲ್ಲಿ ಉತ್ಸಾಹವನ್ನು ವ್ಯಕ್ತಪಡಿಸಲು ಅಥವಾ ಸಂಭ್ರಮಿಸುವಾಗ ನಾವು ಆಗಾಗ್ಗೆ ಈ ಎಮೋಜಿಯನ್ನು ಬಳಸುತ್ತೇವೆ.

ಇದರ ಅರ್ಥವೇನು: ಬನ್ನಿ ವರ್ಷಗಳನ್ನು ಧರಿಸಿರುವ ಅವಳಿ ಹುಡುಗಿಯರು ಎಂದು ಕರೆಯಲಾಗುತ್ತದೆ. ಜಪಾನಿ ಪರಿಕಲ್ಪನೆಯನ್ನು ಪ್ರತಿನಿಧಿಸುವ ಬನ್ನಿ ಹುಡುಗಿಯರು ಅಥವಾ ಪ್ಲೇಬಾಯ್ ಬನ್ನಿಗಳು ಎಂದೂ ಕರೆಯಲಾಗುತ್ತದೆ.

3. ನೃತ್ಯ ಮಾಡುವ ಹುಡುಗಿ:

ನಾವು ಹೇಗೆ ಬಳಸುತ್ತೇವೆ: ಖುಷಿಯಾದಾಗ ಡಾನ್ಸ್ ಮಾಡುವ ಹುಡುಗಿಯ ಎಮೋಜಿಯನ್ನು ಬಳಸುತ್ತೇವೆ.

ಇದರ ಅರ್ಥವೇನು: ನರ್ತಕಿ ಎಂದರ್ಥ

4. ಪ್ರಾರ್ಥನೆ ಕೈಗಳು ಅಥವಾ ಹೈ-ಫೈ?:

ನಾವು ಹೇಗೆ ಬಳಸುತ್ತೇವೆ: ಯಾರೊಂದಿಗಾದರೂ ಮೆಸೇಜ್ ಮಾಡುತ್ತಿರುವಾಗ ನಮಗೆ ಗೌರವ ಕೊಡಬೇಕು ಎಂದೆನಿಸಿದ್ರೆ ಪ್ರಾರ್ಥನೆ ಕೈಗಳ ಎಮೋಜಿಯನ್ನು ಬಳಸುತ್ತೇವೆ. ನಮಸ್ಕಾರ ಮಾಡುವ ರೀತಿಯಂತೆ ಬಳಸುತ್ತೇವೆ.

ಇದರ ಅರ್ಥವೇನು: ಇಬ್ಬರು ವ್ಯಕ್ತಿಗಳು ಸ್ವಾಗತಿಸಿದಾಗ ಎಮೋಜಿಯನ್ನು ಹೈ-ಫೈ ಎಂದು ಹೇಳಲಾಗುತ್ತದೆ. ಮೂಲತಃ ಇದು ಕ್ಷಮೆಯಾಚನೆ ಎಂದರ್ಥ.

5. ಕೆಂಪು ಮುಖದ ದೆವ್ವ:

ನಾವು ಹೇಗೆ ಬಳಸುತ್ತೇವೆ: ತಮಾಷೆಯಾಗಿ ಮಾತನಾಡುವಾಗ ದೆವ್ವದಂತೆ ಹೆದರಿಸುವ ಎಮೋಜಿಯಾಗಿ ಬಳಸುತ್ತೇವೆ.

ಇದರ ಅರ್ಥವೇನು: ಜಪಾನೀಸ್ ಓಗ್ರೆ, ಜಪಾನಿನ ಪೌರಾಣಿಕ ದೈತ್ಯಾಕಾರದ ದೆವ್ವವನ್ನು ಹೋಲುವ ಎಮೋಜಿ.

6. ಹುಡುಗಿಯ ತಲೆಯ ಮೇಲೆ ಕೈ

ನಾವು ಹೇಗೆ ಬಳಸುತ್ತೇವೆ: ಆಘಾತ, ಅಥವಾ ಅಯ್ಯೋ ದೇವರೆ ಅನ್ನೋ ಪರಿಸ್ಥಿತಿ ವಿವರಿಸಲು ಈ ಎಮೋಜಿಯನ್ನು ಬಳಸುತ್ತೇವೆ.

ಇದರ ಅರ್ಥವೇನೆಂದರೆ: ಹುಡುಗಿ ತನ್ನ ತಲೆಯ ಮೇಲೆ ತನ್ನ ಕೈಗಳನ್ನು ಹೊಂದಿರುವುದರಿಂದ, ಅವಳು ತನ್ನನ್ನು ಸರಿ ಎಂಬ ಮಾನವ ಸಂಕೇತವಾಗಿ ಪರಿವರ್ತಿಸಿಕೊಂಡಿದ್ದಾಳೆ ಎಂದರ್ಥ. ಜಪಾನಿಯರು ಸರಿ ಎಂದು ಬರೆಯಲು ಬಯಸಿದಾಗ ಈ ಚಿಹ್ನೆಯನ್ನು ಬಳಸುತ್ತಾರೆ.

7. ಏರ್ ಬ್ಲೋ:

ನಾವು ಹೇಗೆ ಬಳಸುತ್ತೇವೆ: ಏನಾದ್ರೂ ಹೇಳಿ ಆ ಮಾತಿನಿಂದ ತಪ್ಪಿಸಿಕೊಳ್ಳಲು ಈ ಎಮೋಜಿ ಬಳಸುತ್ತೇವೆ.

ಇದರ ಅರ್ಥವೇನು: ಜಪಾನ್ ಭಾಷೆಯಲ್ಲಿ ಈ ಎಮೋಜಿಯ ಅರ್ಥ ವೇಗದಲ್ಲಿ ಚಾಲನೆ ಮಾಡುವುದು.

8. ಶೂಟಿಂಗ್ ಸ್ಟಾರ್:

ನಾವು ಹೇಗೆ ಬಳಸುತ್ತೇವೆ: ಮ್ಯಾಜಿಕ್ ಅನ್ನು ವ್ಯಕ್ತಪಡಿಸಲು ನಾವು ಎಮೋಜಿಯನ್ನು ಶೂಟಿಂಗ್ ಸ್ಟಾರ್ ಆಗಿ ಬಳಸುತ್ತೇವೆ.

ಇದರ ಅರ್ಥವೇನು: ಇದು ನಕ್ಷತ್ರವಲ್ಲ. ಈ ಎಮೋಜಿಯು ತಲೆತಿರುಗುವಿಕೆಯ ಅರ್ಥವನ್ನು ಹೊಂದಿದೆ.

9. ತೆರೆದ ಅಂಗೈಗಳು:

ನಾವು ಹೇಗೆ ಬಳಸುತ್ತೇವೆ: ಸಾಮಾನ್ಯವಾಗಿ ಇದನ್ನು ನಿಲ್ಲಿಸಿ ಎಂದು ಹೇಳಲು ಬಳಸುತ್ತೇವೆ.

ಇದರ ಅರ್ಥವೇನು: ಜಪಾನಿ ಸಂಸ್ಕೃತಿಯಲ್ಲಿ, ಈ ತೆರೆದ ಅಂಗೈಗಳು ಅಪ್ಪುಗೆಯನ್ನು ಪ್ರತಿನಿಧಿಸುತ್ತವೆ.

10. ಕಣ್ಣೀರಿನ ಮುಖ:

ನಾವು ಹೇಗೆ ಬಳಸುತ್ತೇವೆ: ನಾವು ದುಃಖಿತರಾಗಿದ್ದೇವೆ ಮತ್ತು ಬೇಸರದಲ್ಲಿದ್ದೇವೆ ಎಂಬುದನ್ನು ಸೂಚಿಸಲು ಈ ಎಮೋಜಿಯನ್ನು ಬಳಸುತ್ತೇವೆ.

ಇದರ ಅರ್ಥವೇನು: ಇದು ಸ್ಲೀಪಿ ಡ್ರೂಲ್ ಫೇಸ್, ಅಥವಾ ನಿದ್ದೆ ಬರುತ್ತೆ ಎಂದು ಸೂಚಿಸುವ ಎಮೋಜಿ. ಮುಖದ ಮೇಲಿನ ಕಣ್ಣೀರು ವಾಸ್ತವವಾಗಿ ಒಂದು ಹನಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...