
ಏಪ್ರಿಲ್ 8ರಂದು ಬಿಡುಗಡೆಗೆ ಸಿದ್ದವಾಗಿರುವ ವರುಣ್ ತೇಜ್ ಅಭಿನಯದ ಸ್ಪೋರ್ಟ್ಸ್ ಡ್ರಾಮಾ ಆಧಾರಿತ ‘ಗನಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿಸಿದ್ದು ಸ್ಪೆಷಲ್ ಗೆಸ್ಟ್ ಆಗಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಆಗಮಿಸುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.ಈ ಸಿನಿಮಾ ಟ್ರೈಲರ್ ಇಂದು ರಾತ್ರಿ 8 ಗಂಟೆಗೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಕಿರಣ್ ನಿರ್ದೇಶನದ ಈ ಚಿತ್ರದಲ್ಲಿ ವರುಣ್ ತೇಜ್ ಗೆ ಜೋಡಿಯಾಗಿ ಸಾಯ್ ಮಂಜ್ರೇಕರ್ ಅಭಿನಯಿಸಿದ್ದು, ಸುನಿಲ್ ಶೆಟ್ಟಿ, ರಿಯಲ್ ಸ್ಟಾರ್ ಉಪೇಂದ್ರ, ಜಗಪತಿ ಬಾಬು, ನವೀನ್ ಚಂದ್ರ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ ರಿನೈಸೆನ್ಸ್ ಪಿಚ್ಚರ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ.
