
‘ಪಡ್ಡೆ ಹುಲಿ’ ಖ್ಯಾತಿಯ ಶ್ರೇಯಸ್ ನಟನೆಯ ಬಹುನಿರೀಕ್ಷಿತ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು, ಇದಕ್ಕೂ ಮುಂಚೆ ಈ ಹಾಡಿನ ಪ್ರೋಮೋವನ್ನು ಇಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಸ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದು, ಗುಜ್ಜಲ್ ಟಾಕೀಸ್ ಬ್ಯಾನರ್ ನಡಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ನೀಡಿರುವ ಈ ಸಿನಿಮಾ ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ.
