ಉಕ್ರೇನ್ ವಿರುದ್ಧ ರಷ್ಯಾದ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳು 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಕಂಡುಬರದ ಮಟ್ಟವನ್ನು ತಲುಪಿದೆ.
ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಾಗಲೀ, ಬುಲಿಯನ್ ಮಾರುಕಟ್ಟೆಯಲ್ಲಿಯಾಗಲೀ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ದಾಖಲೆಯ ಏರಿಕೆಯಿಂದಾಗಿ, ಡಾಲರ್ ಮೌಲ್ಯದ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರೊಂದಿಗೆ ತೈಲ ಬೆಲೆಯೂ ಏರಿಕೆಯಾಗಿದೆ.
ಇಂಡಿಯನ್ ಆಯಿಲ್‌ನ ಮಾಜಿ ಕಾರ್ಯನಿರ್ವಾಹಕ ಪ್ರೊಫೆಸರ್ ಸುಧೀರ್ ಬಿಶ್ಟ್ ಪ್ರಕಾರ, ರಷ್ಯಾ ವಿಶ್ವದ ಕಚ್ಚಾ ತೈಲದ ಶೇ.12 ರಷ್ಟನ್ನು ಮಾರಾಟ ಮಾಡುತ್ತದೆ. ಇಂಧನ ಆಮದು ವಿಚಾರದಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಇದರಿಂದಾಗಿ ಭಾರತದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇಂದು ರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುವ ಆತಂಕವಿದೆ.
ಕೇಂದ್ರ ಸರ್ಕಾರವು ಇಂಧನ ಮತ್ತು ಡೀಸೆಲ್ ಮೇಲಿನ ಸುಂಕವನ್ನು ರೂ.3 ಅಥವಾ ರೂ.4 ರಷ್ಟು ಕಡಿಮೆ ಮಾಡಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿದರೆ, ಯುರೋಪ್ ರಷ್ಯಾದ ತೈಲವನ್ನು ವಿಶೇಷವಾಗಿ ಅನಿಲವನ್ನು ಅವಲಂಬಿಸಿರುವುದರಿಂದ ಸಾಕಷ್ಟು ಕೊರತೆ ಎದುರಿಸಬೇಕಾಗುತ್ತದೆ.
ಇದರಿಂದ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 10 ರಿಂದ 16 ರೂ.ಗೆ ಏರಬಹುದು. ಏಕಕಾಲದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 8 ರಿಂದ 12 ರೂ.ಗೆ ಏರುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 139 ಡಾಲರ್‌ಗೆ ತಲುಪಿದೆ. ಕಚ್ಚಾ ತೈಲವು ಸುಮಾರು 14 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಸೀಮಿತ ಜಾಗತಿಕ ಪೂರೈಕೆ ಹಾಗೂ ಕೊರತೆಯ ಪರಿಣಾಮವಾಗಿ ಕಚ್ಚಾ ಬೆಲೆಗಳು ತೀವ್ರವಾಗಿ ಏರಿದೆ. ಇದರಿಂದಾಗಿ ಮುಂಬರುವ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕವಿದೆ.
ಕಳೆದ 120 ದಿನಗಳಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ, ಡಾಲರ್ ವಿರುದ್ಧ ರೂಪಾಯಿ 76.92 ಕ್ಕೆ ಕುಸಿದಿದೆ.