
ಇಂದು ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಈಗಾಗಲೇ ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಜಯಿಸಿದೆ. ಟೀಮ್ ಇಂಡಿಯಾ ಯುವ ಕ್ರಿಕೆಟಿಗರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್ ನಲ್ಲಿ ಮಿಂಚುತ್ತಿರುವ ದೇವದತ್ ಪಡಿಕಲ್, ರುತುರಾಜ್ ಗಾಯಕ್ವಾಡ್, ಹಾಗೂ ವರುಣ್ ಚಕ್ರವರ್ತಿ, ಈ ಮೂವರು ಆಟಗಾರರಿಗೆ ಇಂದಿನ ಪಂದ್ಯದಲ್ಲಾದರೂ ಅವಕಾಶ ಸಿಗುತ್ತಾ ಕಾದು ನೋಡಬೇಕಾಗಿದೆ.
BIG NEWS: ವರುಣನ ಆರ್ಭಟಕ್ಕೆ ಕರುನಾಡು ತತ್ತರ: 73 ರಾಷ್ಟ್ರೀಯ ಹೆದ್ದರಿಗಳು ಕುಸಿತ; 9 ಜನ ದುರ್ಮರಣ
ಶ್ರೀಲಂಕಾ ತಂಡ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ನಿಂದ ಪಾರಾಗಿದೆ. ಅಕಿಲ ಧನಂಜಯ, ಹಾಗೂ ಪ್ರವೀಣ್ ಜಯವಿಕ್ರಮ, ಸೇರ್ಪಡೆಯಿಂದ ಶ್ರೀಲಂಕಾ ತಂಡದ ಸಾಮರ್ಥ್ಯ ಹೆಚ್ಚಿದಂತಾಗಿದೆ. ಇಂದು ರಾತ್ರಿ 8ಗಂಟೆಗೆ ಪಂದ್ಯ ಪ್ರಸಾರವಾಗಲಿದೆ.