
ಮಹೇಶ್ ಸಿ ನಿರ್ದೇಶನದ ಪ್ರಜಯ್ ಜಯರಾಮ್ ಅಭಿನಯದ ಬಹುನಿರೀಕ್ಷಿತ ‘ಲವ್’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ, ಮಧ್ಯಾಹ್ನ 12:34ಕ್ಕೆ ಈ ಲಿರಿಕಲ್ ಸಾಂಗ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ಕಣ್ಮಣಿ ಎಂಬ ಈ ಹಾಡಿಗೆ ರೋಷಿತ್ ವಿಜಯನ್ ಸಂಗೀತ ಸಂಯೋಜನೆ ನೀಡುವುದರ ಜೊತೆಗೆ ಧ್ವನಿಗೂಡಿಸಿದ್ದು ನಿರ್ದೇಶಕ ಮಹೇಶ್ ಅಮ್ಮಲಿದೊಡ್ಡಿಮನಿ ಸಾಹಿತ್ಯ ಬರೆದಿದ್ದಾರೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಶ್ರೀ ಕಾಳಬೈರೇಶ್ವರ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್ ನಿರ್ಮಾಣ ಮಾಡಿದ್ದು, ವೃಷ ನಾಯಕಿಯಾಗಿ ಅಭಿನಯಿಸಿದ್ದಾರೆ.
