alex Certify ಇಂದು ಬಿಡುಗಡೆಯಾಗಲಿವೆ ಸ್ಪೂಕಿ ಕಾಲೇಜ್ ಚಿತ್ರದ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿವೆ ಸ್ಪೂಕಿ ಕಾಲೇಜ್ ಚಿತ್ರದ ವಿಡಿಯೋ ಹಾಡು

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಾರರ್ ಸಿನಿಮಾಗಳು ಭರ್ಜರಿ ಸೌಂಡ್ ಮಾಡುತ್ತಿವೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹಾರರ್ ಕಾಮಿಡಿ ಆಧಾರಿತ ‘ಸ್ಪೂಕಿ ಕಾಲೇಜ್’ ನವೆಂಬರ್‌ 25ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದ್ದು ಇದಕ್ಕೂ ಮುಂಚೆ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಮೆಲ್ಲುಸಿರೆ ಸವಿಗಾನ ಎಂಬ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಸಿನಿಮಾ ಹಾಡನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರೇಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಇಂದು ಶ್ರೀದೇವಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ರಿಲೀಸ್ ಆಗಲಿದೆ.

ಭರತ್ ಜಿ ನಿರ್ದೇಶನದ ಈ ಚಿತ್ರದಲ್ಲಿ ವಿವೇಕ್ ಸಿಂಹ ಹಾಗೂ ಖುಷಿ ರವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಶ್ರೀದೇವಿ ಎಂಟರ್ ಟೇನರ್ಸ್ ಬ್ಯಾನರ್ ನಡಿ ಎಚ್ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಕೆ ಎಸ್ ಶ್ರೀಧರ್, ಅಜಯ್ ಪೃಥ್ವಿ, ಹನುಮಂತೇಗೌಡ, ಶರಣ್ಯ ಶೆಟ್ಟಿ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...