alex Certify ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘RRR’ ಸಿನಿಮಾದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಕಳೆದ ವರ್ಷ ರಿಲೀಸ್ ಆಗಿದ್ದ ಈ ಚಿತ್ರದ ಎರಡು ಟೀಸರ್ ಗಳು ಭಾರತದಲ್ಲೇ ಅತಿ ಹೆಚ್ಚು ಕಮೆಂಟ್ಸ್ ಪಡೆದ ಟೀಸರ್ ಎಂಬ ದಾಖಲೆ ಬರೆದಿದ್ದವು. ಇದೀಗ ಮತ್ತೊಂದು ರೆಕಾರ್ಡ್ ಸೃಷ್ಟಿಸಲು ಸಜ್ಜಾಗಿದೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಗೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.

ದೀಪಾವಳಿಯಂದು ಹಸು ನುಂಗಿದ್ದ ಚಿನ್ನದ ಸರ ಈಗ ಹೊರಬಂತು….!

ಡಿ.ವಿ.ವಿ. ದಾನಯ್ಯ ತಮ್ಮ ಡಿ.ವಿ.ವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಜ್ಯೂ. ಎನ್ಟಿಆರ್ ಹಾಗೂ ಹಾಗೂ ರಾಮ್ ಚರಣ್ ಸೇರಿದಂತೆ ಅಜಯ್ ದೇವಗನ್, ಅಲಿಯಾ ಭಟ್, ರಾಯ್ ಸ್ಟೀವನ್ ಸನ್, ಒಲಿವಿಯಾ ಮೋರಿಸ್, ಶ್ರೀಯಾ ಸರನ್ ಅಭಿನಯಿಸಿದ್ದಾರೆ. ಜನವರಿ 7ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...