
ಶಂಕರ್ ಕೋನಮಾನಹಳ್ಳಿ ನಿರ್ದೇಶನದ ʼಶಂಭೋ ಶಿವಶಂಕರʼ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಹಾಡಹಗಲೇ ಎಂಬ ಹಾಡಿಗೆ ನಿಹಾಲ್ ಟೌರೋ ಹಾಗೂ ಶ್ವೇತಾ ಫ್ರಭು ಧ್ವನಿಗೂಡಿಸಿದ್ದು ಗೊಸ್ಪೀರ್ ಸಾಹಿತ್ಯ ಹಾಗೂ ಹಿತಾನ್ ಹಾಸನ್ ಸಂಗೀತ ಸಂಯೋಜನೆ ನೀಡಿದ್ದಾರೆ.
ವರ್ತೂರು ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಅಭಯ್ ಪುನೀತ್ ಸೋನಾಲ್ ಮೊಂಟೈರೋ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾದ ನಾಟಿಕೋಳಿ ಹಾಡು ಯುಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಇದೊಂದು ಲವ್ ಸ್ಟೋರಿ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರ ಎಂದು ಹೇಳಲಾಗಿದೆ.
