![](https://kannadadunia.com/wp-content/uploads/2023/06/7411293d-9050-4839-ac21-66f63c3d7a6c-1.jpg)
ಮಂಜು ಮಿಲನ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ‘ರಿದಂ’ ಚಿತ್ರದ ಟೀಸರ್ ಇಂದು ಮಧ್ಯಾಹ್ನ 12:30ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
ಹಾಡುಗಳಿಂದಲೇ ಸಕ್ಕತ್ ಸೌಂಡ್ ಮಾಡಿರೋ ಈ ಸಿನಿಮಾ ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ.
ಎನ್ ಆರ್ ಮಂಜುನಾಥ್ ತಮ್ಮ ಮಂಜು ಮೂವೀಸ್ ಬ್ಯಾನರ್ ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಂಜು ಮಿಲನ್ಗೆ ಜೋಡಿಯಾಗಿ ಮೇಘಶ್ರೀ ಅಭಿನಯಿಸಿದ್ದಾರೆ.
ವಿನಯ ಪ್ರಕಾಶ್, ಭವ್ಯ, ಸುಮನ್, ಶಿವರಾಂ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಏಟಿ ರವೀಶ್ ಈ ಸಿನಿಮಾಗೆ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2023/06/c5020cd0-fed5-463c-88fb-d44d85e48656.jpg)