ಬೆಂಗಳೂರು: ಯುವಕರ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ನಟ ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಆಘಾತವನ್ನುಂಟು ಮಾಡಿದೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪುನೀತ್ ಚಿಕ್ಕ ವಯಸ್ಸಿನಲ್ಲಿಯೇ ದೊಡ್ದ ಸಾಧನೆಯನ್ನು ಮಾಡಿದವರು. ತಮ್ಮ ತಂದೆಯ ಗುಣಗಳನ್ನೇ ಅಳವಡಿಸಿಕೊಡಿದ್ದರು. ತುಂಬಾ ಸರಳ, ನಯ ವಿನಯದಿಂದ ಕೂಡಿದವರಾಗಿದ್ದು, ಪುನೀತ್ ಹಾಗೂ ನಮ್ಮ ಒಡನಾಟ ಇಂದು ನಿನ್ನೆಯದಲ್ಲ. ತುಂಬಾ ವರ್ಷಗಳಿಂದ ಅವರ ಹಾಗೂ ಅವರ ಕುಟುಂಬದ ಜೊತೆ ಪರಿಚಯವಿತ್ತು. ನಿನ್ನೆಯಷ್ಟೇ ಪುನೀತ್ ಜೊತೆ ಮಾತನಾಡಿದ್ದೆ. ಆದರೆ ಇಂದು ಅವರಿಲ್ಲ ಎಂಬುದು ಆಘಾತಕಾರಿ ಸಂಗತಿ ಎಂದು ಹೇಳಿದರು.
PM Kisan samman nidhi update: ಈ ಕೆಲಸ ಮಾಡದೆ ಹೋದ್ರೆ ರೈತರಿಗೆ ಸಿಗಲ್ಲ ಹಣ
ಇಂದು ಪುನೀತ್ ಭೇಟಿಗೆ ಸಮಯ ನೀಡಿದ್ದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಖಾಸಗಿ ವೆಬ್ ಸೈಟ್ ಲಾಂಚ್ ಮಾಡುವ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಒಂದು ಕಾರ್ಯಕ್ರಮದ ನಿಮಿತ್ತ ನನ್ನನ್ನು ಭೇಟಿಯಾಗಬೇಕಿತ್ತು. ಆದರೆ ವಿಧಿ ಅವರನ್ನು ಬೇರೆಡೆ ಕರೆದೊಯ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪುನೀತ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಾರದು ಶಾಂತಿ ಕಾಪಾಡಬೇಕು ಎಂದು ಮನವಿ ಮಡುವುದಾಗಿ ತಿಳಿಸಿದರು.