ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಇಂದು ‘ನಿವಾರ್ಯ’ ಎಂಬ ಕಿರುಚಿತ್ರವೊಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಸಿಹಿಕಹಿ ಚಂದ್ರು ಸೇರಿದಂತೆ ಸೋನು ಗೌಡ, ಸುಜಯ್ ಶಾಸ್ತ್ರೀ, ಕಾರ್ತಿಕ್ ಕುಂದೂರು, ಸ್ವಾತಿ ಉಮೇಶ್, ಸುಂದರ್ ವೀಣಾ, ಕೃಷ್ಣ ಹೆಬ್ಬಳೆ, ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಂದನ್ ಶಂಕರ್ ಈ ಕಿರುಚಿತ್ರದ ಕಥೆ ಬರೆದಿದ್ದು, ಪಿಡಿ ಸತೀಶ್ ಚಂದ್ರ ನಿರ್ದೇಶನ ಮಾಡಿದ್ದಾರೆ. ವಿಕಾಸ್ ವಸಿಷ್ಠ ಹಾಗೂ ನಿಕಿಲ್ ಪಾರ್ಥಸಾರಥಿ ಸಂಗೀತ ನೀಡಿದ್ದಾರೆ. ವೀಕ್ಷಕರ ಮನಸ್ಸಿಗೆ ತಲುಪುವಂಥ ಶಾರ್ಟ್ ಫಿಲ್ಮ್ ಇದಾಗಿದ್ದು ಎಲ್ಲರೂ ನೋಡಲೇಬೇಕಾದ ಕಿರುಚಿತ್ರವಿದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಕನ್ನಡ ಶಾರ್ಟ್ ಫಿಲ್ಮ್‌ಗಳು ಯೂಟ್ಯೂಬ್ ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿವೆ.