ಇಂದು ಲೆಜೆಂಡ್ಸ್ ಲೀಗ್ ಟಿ ಟ್ವೆಂಟಿ ಪಂದ್ಯ ಅಂತಿಮ ಘಟ್ಟ ತಲುಪಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆ ಹೀರೋಗಳನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಇರ್ಫಾನ್ ಪಠಾಣ್ ನಾಯಕತ್ವದ ಬಿಲ್ವಾರ ಕಿಂಗ್ಸ್ ಇಂದು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ತಂಡಗಳು ಇಂತಿವೆ
ಇಂಡಿಯಾ ಕ್ಯಾಪಿಟಲ್ಸ್: ಗೌತಮ್ ಗಂಭೀರ್ (ನಾಯಕ) ಮಸಕಡ್ಜಾ, ರಾಸ್ ಟೇಲರ್, ದಿನೇಶ್ ರಾಮ್ದಿನ್, ಆಶ್ಲೆ ನರ್ಸ್, ರಜತ್ ಭಾಟಿಯಾ, ಪಂಕಜ್ ಸಿಂಗ್, ಪ್ರವೀಣ್ ತಾಂಬೆ, ಮಿಚೆಲ್ ಜಾನ್ಸನ್, ಲಿಯಾಮ್ ಪ್ಲಂಕೆಟ್ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಈ ತಂಡ ಹೊಂದಿದೆ.
ಇನ್ನೂ ಜಿಂಬಾಬ್ವೆ ತಂಡದ ಸೋಲೋಮನ್ ಮೈರ್ ಗೆ ಕಾಲಿನ ಸಮಸ್ಯೆಯಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ
ಬಿಲ್ವಾರ ಕಿಂಗ್ಸ್ : ಇರ್ಫಾನ್ ಪಠಾಣ್ (ನಾಯಕ), ಯೂಸುಫ್ ಪಠಾಣ್, ಶೇನ್ ವ್ಯಾಟ್ಸನ್, ಪೋರ್ಟರ್ ಫೀಲ್ಡ್, ಮೋರ್ನೇ ವ್ಯಾನ್ ವೈಕ್, ಜಿಸೆಲ್ ಕಾರಿಯ, ಎಡ್ವರ್ಡ್, ಶ್ರೀಶಾಂತ್, ಮಾಂಟಿ ಪನೇಸರ್, ಸುದೀಪ್ ತ್ಯಾಗಿ, ರಾಜೇಶ್ ಬಿಶ್ನೋಯ್, ನಮನ್ ಓಜಾ ಹಾಗೂ ಶ್ರೀವಾಸ್ತವ ಕಣಕ್ಕಿಳಿಯಲಿದ್ದಾರೆ. ಮೂವರು ಸ್ಟಾರ್ ಆಲ್ರೌಂಡರ್ ಹೊಂದಿರುವ ಈ ತಂಡದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇಂದು 2 ತಂಡಗಳಿಂದ ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ.