
ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಆಂಡ್ರ್ಯೂ ಬಾಲ್ಬಿರ್ನಿ ನಾಯಕತ್ವದ ಐರ್ಲ್ಯಾಂಡ್ ತಂಡ ಸವಾಲಾಕಲಿದೆ. ಏಕದಿನ ಸರಣಿಯ 3 ಪಂದ್ಯಗಳು ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 4ನೇ ಸ್ಥಾನದಲ್ಲಿದ್ದರೇ ಐರ್ಲೆಂಡ್ ತಂಡ 12ನೇ ಸ್ಥಾನದಲ್ಲಿದೆ.
ಟ್ರೋಫಿ ಗೆದ್ದ ಸಂತಸದಲ್ಲಿ ಆನಂದಭಾಷ್ಪ ಸುರಿಸಿದ ಮೆಸ್ಸಿ
ತೆಂಬಾ ಬಾವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಹಾಗೂ ಡೇವಿಡ್ ಮಿಲ್ಲರ್ ಈ ಇಬ್ಬರು ಅನುಭವಿ ಆಟಗಾರರಿದ್ದಾರೆ. ನಮ್ಮ ಭಾರತದಲ್ಲಿ ಜನಿಸಿ ಐರ್ಲ್ಯಾಂಡ್ ತಂಡದಲ್ಲಿ ಆಡುತ್ತಿರುವ ಸಿಮಿ ಸಿಂಗ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ, ಐರ್ಲ್ಯಾಂಡ್ ತಂಡದ ಅತ್ಯುತ್ತಮ ಆಲ್ರೌಂಡರ್ ಆಗಿದ್ದಾರೆ. ಇಂದು ಮದ್ಯಾಹ್ನ 3.15ಕ್ಕೆ ಪಂದ್ಯ ಆರಂಭವಾಗಲಿದೆ.