
ಬಾಲಿವುಡ್ ನಟ ರಣವೀರ್ ಸಿಂಗ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ರಣವೀರ್ ಸಿಂಗ್ 2010ರಲ್ಲಿ ಮನೀಷ್ ನಿರ್ದೇಶನದ ‘ಬ್ಯಾಂಡ್ ಬಾಜಾ ಭಾರತ್’ ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದರು. ರಣವೀರ್ ಸಿಂಗ್ ಇತ್ತೀಚೆಗೆ ಕಪಿಲ್ ದೇವ್ ಜೀವನಾಧಾರಿತ ’83’ ಚಿತ್ರದಲ್ಲಿ ನಟಿಸಿದ್ದು, ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಇನ್ನೇನು ಈ ಎರಡು ಸಿನಿಮಾಗಳು ತೆರೆಮೇಲೆ ಬರಬೇಕಾಗಿದೆ.
ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ರಣವೀರ್ ಸಿಂಗ್ ‘ಜಯೇಶ್ಭಾಯ್ ಜೋರ್ದಾರ್’ ಹಾಗೂ ‘ಸರ್ಕಸ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು ಇದರ ಬೆನ್ನಲ್ಲೇ ‘ರಾಕಿ ಹೌರ್ ರಾಣಿ ಕಿ ಪ್ರೇಮ್ ಕಹಾನಿ’ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಬಾಲಿವುಡ್ ಸಿನಿತಾರೆಯರು ಸೋಶಿಯಲ್ ಮೀಡಿಯಾದಲ್ಲಿ ರಣವೀರ್ ಸಿಂಗ್ ಗೆ ಶುಭಾಶಯ ತಿಳಿಸಿದ್ದಾರೆ.