ದಕ್ಷಿಣ ಆಫ್ರಿಕಾ ಹಾಗೂ ಐರ್ಲ್ಯಾಂಡ್ ನಡುವಣ ಇಂದು ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ದಕ್ಷಿಣ ಆಫ್ರಿಕಾ 6ನೇ ಸ್ಥಾನದಲ್ಲಿದ್ದರೇ ಐರ್ಲೆಂಡ್ ತಂಡ 12ನೇ ಸ್ಥಾನದಲ್ಲಿದೆ.
ಬಂಪರ್..! ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಜೊತೆ ಹೆಚ್ಚಾಗಲಿದೆ ಈ ಭತ್ಯೆ
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಟಬ್ರೈಜ್ ಶಮ್ಸಿ ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾ ಹಾಗೂ ಐರ್ಲ್ಯಾಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆದಿದ್ದು ಮೊದಲ ಪಂದ್ಯ ಮಳೆಯಿಂದ ರದ್ದಾಯಿತು ನಂತರ ಎರಡು ಪಂದ್ಯಗಳಲ್ಲಿ ಐರ್ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡ ಒಂದೊಂದು ಜಯಕಂಡು ಸರಣಿ ಸಮಬಲ ಸಾಧಿಸಿವೆ. ಇಂದಿನಿಂದ ಜುಲೈ 24ರವರೆಗೆ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ.