alex Certify ಈ ರಾಶಿಯವರಿಗೆ ಸಿಗಲಿದೆ ʼಉದ್ಯೋಗʼದಲ್ಲಿ ಬಡ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಸಿಗಲಿದೆ ʼಉದ್ಯೋಗʼದಲ್ಲಿ ಬಡ್ತಿ

ಮೇಷ : ಬಹಳ ಸಮಯದಿಂದ ನಿಮ್ಮಲ್ಲಿ ಮೂಡಿದ್ದ ತಪ್ಪು ಗ್ರಹಿಕೆಯೊಂದು ನಿವಾರಣೆಯಾಗಲಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಪಡೆಯಲಿದ್ದೀರಿ. ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರದಲ್ಲಿ ನೀವು ಎಚ್ಚರವಾಗಿದ್ದಷ್ಟೂ ಒಳ್ಳೆಯದು.

ವೃಷಭ : ಇಂದು ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ಹೀಗಾಗಿ ಹೊರಗಡೆ ಓಡಾಟ ಬೇಡವೇ ಬೇಡ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ ಎಂಬ ಸುದ್ದಿಯೊಂದನ್ನ ಕೇಳ್ಪಡಲಿದ್ದೀರಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಮಿಥುನ : ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆ ಸಿಗಲಿದೆ. ವೀಕೆಂಡ್​ ಆದ್ದರಿಂದ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುತ್ತೀರಾ. ಮನೆಗೆ ಅನಿರೀಕ್ಷಿತ ಅತಿಥಿ ಆಗಮನದ ನಿರೀಕ್ಷೆ ಇದೆ. ಅತ್ಯಮೂಲ್ಯ ವಸ್ತುವೊಂದನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ. ಜಾಗರೂಕರಾಗಿರಿ.

ಕಟಕ : ಹಣವನ್ನ ವ್ಯರ್ಥ ಮಾಡುವ ನಿಮ್ಮ ಗುಣವನ್ನ ಬದಲಾಯಿಸಿಕೊಳ್ಳಿ. ಸಹೋದರರಿಂದ ಉತ್ತಮ ಸಲಹೆಯನ್ನ ಸ್ವೀಕರಿಸಲಿದ್ದೀರಾ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಗಂಟಲು ಹಾಗೂ ಶೀತದ ಸಮಸ್ಯೆ ನಿಮ್ಮ ಭಾದಿಸಬಹುದು. ಒತ್ತಡಕ್ಕೆ ಸಿಕ್ಕು ಯಾರಿಗೂ ಹಣಕಾಸಿನ ನೆರವು ನೀಡುವಂತಹ ಭರವಸೆ ನೀಡಲೇಬೇಡಿ.

ಸಿಂಹ :ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನ ಕಳೆಯುತ್ತೀರಾ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳಲಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಲಿದ್ದೀರಿ.

ಕನ್ಯಾ: ಹಗಲುಗನಸು ಕಾಣೋದನ್ನ ಬಿಟ್ಟು ವಾಸ್ತವ ಜೀವನದಲ್ಲಿ ಬದುಕೋದನ್ನ ರೂಢಿಸಿಕೊಳ್ಳಿ. ಅಪರಿಚಿತರೊಂದಿಗೆ ಅನಗತ್ಯ ಮಾತು ಬೇಡವೇ ಬೇಡ. ಸ್ವಾಸ್ಥ್ಯವನ್ನ ಹೆಚ್ಚಿಸಿಕೊಳ್ಳಲು ದೇಹದಂಡನೆ ಮಾಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾ : ವಾರ ಪೂರ್ತಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನಿಮಗೆ ಇಂದಿನಿಂದ ಶುಭ ಯೋಗ ಕೂಡಿ ಬರಲಿದೆ. ನಿಮ್ಮ ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಜವಳಿ ಉದ್ಯಮಿಗಳಿಗೆ ಇದು ಉತ್ತಮ ದಿನ. ವಿವಾಹಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ವೃಶ್ಚಿಕ : ನಿಮ್ಮ ವ್ಯಾಪಾರದ ಉದ್ಯಮವನ್ನ ಇನ್ನಷ್ಟು ವಿಸ್ತರಣೆ ಮಾಡಲಿದ್ದೀರಿ. ನಿಮ್ಮ ಪ್ರತಿಭೆಗೆ ಸೂಕ್ತ ಗೌರವ ಸಿಗಲಿದೆ. ಮನಸ್ಸಿಗೆ ಚಂಚಲವಾಗಲು ಅವಕಾಶ ನೀಡಬೇಡಿ. ಈ ದಿನವನ್ನ ನೀವು ಉತ್ತಮವಾಗಿ ಕಳೆಯುತ್ತೀರಿ. ದೇವರ ಅನುಗ್ರಹವಿದೆ.

ಧನು : ಹಿರಿಯರ ಮಾರ್ಗದರ್ಶನವನ್ನ ಸ್ವೀಕಾರ ಮಾಡಲಿದ್ದೀರಾ. ನೀರಿನಂತೆ ಹಣವನ್ನ ಪೋಲು ಮಾಡಬೇಡಿ. ಅನವಶ್ಯಕ ವ್ಯಕ್ತಿಗಳ ಜೊತೆ ಮಾತು ಬೇಡವೇ ಬೇಡ. ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ.

ಮಕರ : ಉನ್ನತ ಶಿಕ್ಷಣ ಮಾಡಬೇಕು ಎಂಬ ನಿಮ್ಮ ಕನಸು ಈಡೇರಲಿದೆ. ಕೋಪವನ್ನ ಕಡಿಮೆ ಮಾಡಿಕೊಳ್ಳಿ. ಜೀವನ ಸಂಗಾತಿಗೆ ಉತ್ತಮ ಉಡುಗೊರೆ ನೀಡಿ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನ ಕಳೆಯುತ್ತೀರಾ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಕುಂಭ : ಸಣ್ಣ ಕಾಯಿಲೆಗಳು ನಿಮ್ಮ ಚಿಂತೆಗೀಡುಮಾಡಬಹುದು. ಬಹುದಿನಗಳ ಹಿಂದಿನ ಕನಸೊಂದು ನನಸಾಗೋದ್ರಿಂದ ತುಂಬಾ ಖುಷಿಯಾಗಿ ಇರಲಿದ್ದೀರಾ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ನವದಂಪತಿಗೆ ಸಂತಾನ ಭಾಗ್ಯವಿದೆ.

ಮೀನ : ಲಾಭ ಪಡೆಯಬೇಕು ಅನ್ನೋದು ಕೆಟ್ಟದಲ್ಲ. ಹಾಗಂತ ಅಡ್ಡದಾರಿ ಹಿಡಿಯೋದು ಬೇಡ. ಇದರಿಂದ ನಷ್ಟ ಕೂಡ ಆಗಬಹುದು ಅನ್ನೋದು ತಲೆಯಲ್ಲಿ ಇರಲಿ. ಪೋಷಕರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ವೈದ್ಯಕೀಯ ವೃತ್ತಿಯವರಿಗೆ ಅವಕಾಶ ಇದೆ. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಇದು ಸಾಮಾನ್ಯ ದಿನ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...