
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ ಇಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡ 5 ಟಿ ಟ್ವೆಂಟಿ ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಇಂದಿನ ಕೊನೆಯ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಫೆಬ್ರವರಿ 21ರಂದು ‘ಭೀಮ್ಲಾ ನಾಯಕ್’ ಟ್ರೈಲರ್ ರಿಲೀಸ್
ಶನಾಕ ನೇತೃತ್ವದ ಶ್ರೀಲಂಕಾ ತಂಡ ಕೊನೆಯ ಪಂದ್ಯದಲ್ಲಾದರೂ ಜಯ ಸಾಧಿಸುತ್ತಾ ಕಾದು ನೋಡಬೇಕಾಗಿದೆ. ಕಳಪೆ ಪ್ರದರ್ಶನ ನೀಡುತ್ತಿರುವ ಶ್ರೀಲಂಕಾ ತಂಡ ಫೆಬ್ರವರಿ 24ರಂದು ಭಾರತ ತಂಡವನ್ನು ಎದುರಿಸಲಿದ್ದು, ಇದು ದೊಡ್ಡ ಸವಾಲಾಗಲಿದೆ. ಫೆಬ್ರವರಿ 24ರಿಂದ ಫೆಬ್ರವರಿ 27ರವರೆಗೆ 3ಟಿ ಟ್ವೆಂಟಿ ಪಂದ್ಯಗಳು ಹಾಗೂ ಮಾರ್ಚ್ 4ರಿಂದ ಮಾರ್ಚ್ 12ರವರೆಗೆ ಟೆಸ್ಟ್ ಸರಣಿ ನಡೆಯಲಿದೆ.