ನಾಡಿನೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಈ ದಿನ ನಾಗರಾಜನಿಗೆ ವಿಶೇಷ ಪೂಜೆ ನಡೆಯುತ್ತದೆ. ನಾಗರಾಜನ ಪೂಜೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು.
ನಾಗರಪಂಚಮಿ ದಿನ ನೆಲವನ್ನು ಅಗೆಯಬಾರದು. ಹೊಲವನ್ನು ಉಳಿಮೆ ಮಾಡುವ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬಾರದು.
ನಾಗರಪಂಚಮಿ ದಿನದಂದು ತೀಕ್ಷ್ಣವಾದ, ಸೂಕ್ಷ್ಮವಾದ ವಸ್ತುಗಳ ಬಳಕೆಯನ್ನು ತಪ್ಪಿಸಬೇಕು. ಮುಖ್ಯವಾಗಿ ಸೂಜಿ-ದಾರವನ್ನು ಬಳಸಬಾರದು.ಇದು ಅಶುಭ.
ಒಲೆ ಮೇಲೆ ಆಹಾರ ಬೇಯಿಸಲು ಕಬ್ಬಿಣದ ಪಾತ್ರೆಯನ್ನು ಬಳಸಬಾರದು. ನಾಗ ದೇವರಿಗೆ ಇದ್ರಿಂದ ಕಷ್ಟವಾಗುತ್ತದೆ.
ನಾಗರಪಂಚಮಿ ದಿನ ಯಾವುದೇ ವ್ಯಕ್ತಿ ಜೊತೆ ಜಗಳ ಮಾಡಬೇಡಿ. ಯಾರ ಜೊತೆಯೂ ಗಲಾಟೆ ಮಾಡಬೇಡಿ. ಕೆಟ್ಟ ಶಬ್ಧ ಬಳಸಬೇಡಿ.
ರಾಹು-ಕೇತುವಿನ ಪ್ರಭಾವ ಹೆಚ್ಚಿರುವ ಜನರು ನಾಗರ ಪೂಜೆಯನ್ನು ವಿಶೇಷವಾಗಿ ಮಾಡಬೇಕು. ಇಂದು ಮದ್ಯ, ಮಾಂಸ ಆಹಾರ ಸೇವನೆ ಮಾಡಬೇಡಿ. ಶಿವನ ಮಂತ್ರವನ್ನು ಜಪಿಸಿ.