ಶಿವಮೊಗ್ಗ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದಿಂದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಐ.ಜಿ.ಎನ್.ಒ.ಯು.) ಮಾನ್ಯತೆ ಪಡೆದಿದ್ದು, ಸಾವಿರಾರು ಜನರಿಗೆ ಪದವಿ ನೀಡುತ್ತಾ ಬಂದಿದೆ ಎಂದು ಇಗ್ನೋದ ಅಸಿಸ್ಟೆಂಟ್ ರೀಜನಲ್ ಡೈರೆಕ್ಟರ್ ಡಾ. ಷಣ್ಮುಗಂ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಉದ್ಯೋಗಸ್ಥರಿಗೆ ಮತ್ತು ನೇರವಾಗಿ ಕಾಲೇಜುಗಳಿಗೆ ಹೋಗಿ ಶಿಕ್ಷಣ ಪಡೆಯಲು ಆಗದವರಿಗೆ ಪದವಿ, ಸ್ನಾತಕೋತ್ತರ ಪದವಿಗಳನ್ನು ನೀಡುತ್ತಾ ಬಂದಿದೆ. ಬಡ್ತಿ ಪಡೆಯುವವರಿಗೆ ಇದರಿಂದ ಅನುಕೂಲವಾಗುತ್ತಿದೆ.
ನ್ಯಾಕ್ ನಿಂದ ಮಾನ್ಯತೆ ಪಡೆದಿದೆ. 67 ಪ್ರಾದೇಶಿಕ ಕೇಂದ್ರಗಳಿವೆ. 3 ಸಾವಿರ ಅಧ್ಯಯನ ಕೇಂದ್ರಗಳಿವೆ. 20 ಸಾಗರೋತ್ತರ ಸಂಸ್ಥೆಗಳಿವೆ. 3 ದಶಲಕ್ಷ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಸಂಶೋಧನಾ ಪದವಿಗಳನ್ನು ನೀಡಲಾಗುತ್ತಿದೆ. ಸುಮಾರು 200 ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.
ನಮ್ಮ ದೂರ ಶಿಕ್ಷಣ ಕೇಂದ್ರದಿಂದ ಶಿಕ್ಷಣ ಪಡೆಯುವ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದೆ. ವಿವಿಧ ರೀತಿಯ ಶಿಕ್ಷಣ ಸಾಲಗಳನ್ನು ಕೂಡ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಪ್ರಾದೇಶಿಕ ಕೇಂದ್ರವಿದೆ. ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರಗಳಿವೆ ಎಂದರು.
ಜುಲೈ ತಿಂಗಳಿಂದಲೇ ಪ್ರವೇಶಾತಿ ಪ್ರಾರಂಭವಾಗಿದೆ. ಜುಲೈ 30 ರೊಳಗೆ ಆನ್ ಲೈನ್ ನಲ್ಲಿ ಪ್ರವೇಶವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. (ಕೊನೆ ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ). ಆಸಕ್ತರು ದೂರವಾಣಿ ಸಂಖ್ಯೆ 080 29607272 ಅಥವಾ ವಾಟ್ಸಾಪ್ ಸಂಖ್ಯೆ 94493 37272 ಸಂಪರ್ಕಿಸಬಹುದಾಗಿದೆ ಎಂದರು.
ಶಿವಮೊಗ್ಗದ ಅಧ್ಯಯನ ಕೇಂದ್ರದ ಡಾ. ಎಂ. ವೆಂಕಟೇಶ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಡಿವಿಎಸ್ ಕಾಲೇಜ್ ನಲ್ಲಿರುವ ಅಧ್ಯಯನ ಕೇಂದ್ರಕ್ಕೆ ಬಂದು ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.