ಮಂಗಳೂರು – ಬೆಂಗಳೂರು ನಡುವೆ ರೈಲಿನಲ್ಲಿ ಸಂಚರಿಸುವ ವೇಳೆ ಪ್ರಕೃತಿ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೀಗಾಗಿಯೇ ಬಹಳಷ್ಟು ಪ್ರಕೃತಿ ಪ್ರಿಯರು ದಕ್ಷಿಣ ಕನ್ನಡದಿಂದ ರೈಲು ಏರಲು ಬಯಸುತ್ತಾರೆ.
ಆದರೆ ಈವರೆಗೆ ಕಿಟಕಿ ಪಕ್ಕ ಸೀಟು ಸಿಕ್ಕವರಿಗೆ ಮಾತ್ರ ಪ್ರಕೃತಿಯ ಸುಂದರ ದೃಶ್ಯಗಳನ್ನು ಸವಿಯಲು ಸಾಧ್ಯವಾಗಿತ್ತು. ಇದೀಗ ರೈಲ್ವೆ ಇಲಾಖೆ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದ ಸಂಚಾರ ಆರಂಭವಾಗಲಿದೆ.
ಮೈಸೂರು ಆಸ್ಪತ್ರೆಯಲ್ಲೇ ಆಘಾತಕಾರಿ ಕೃತ್ಯ: ವಿಶೇಷಚೇತನ ಮಹಿಳೆ ಮೇಲೆ ವಿಕೃತಕಾಮಿಯಿಂದ ಅತ್ಯಾಚಾರ
ಈ ರೈಲಿನಲ್ಲಿ 2 ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲೂ 44 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಅಲ್ಲದೆ ರೆಫ್ರಿಜಿರೇಟರ್, ಮೈಕ್ರೋಓವನ್ ಸೇರಿದಂತೆ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಇದರಲ್ಲಿವೆ.
ಅಗಲವಾದ ಗಾಜಿನ ಕಿಟಕಿಗಳನ್ನು ಈ ಬೋಗಿಗಳು ಹೊಂದಿದ್ದು, 180 ಡಿಗ್ರಿ ತಿರುಗುವ ಚೇರ್ ಸಹ ಇದೆ. ಈ ರೈಲು ಸಂಚಾರಕ್ಕೆ ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಾಗುತ್ತದೆ.