ಮದುವೆ ಪ್ರತಿಯೊಬ್ಬರ ಜೀವನದಲ್ಲಾಗುವ ಮಹತ್ವದ ಬದಲಾವಣೆ. ಮದುವೆ ಎರಡೂ ಜೀವಗಳ ಜೊತೆ ಎರಡು ಕುಟುಂಬವನ್ನು ಒಂದು ಮಾಡುತ್ತದೆ. ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಜೀವನದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಜೀವನ ಪೂರ್ತಿ ಪ್ರೀತಿಯಿಂದ ಜೊತೆಗಿರುವ ಸಂಗಾತಿ ಆಯ್ಕೆಗೆ ಎಲ್ಲರೂ ಮಹತ್ವ ನೀಡುತ್ತಾರೆ. ಸಂಗಾತಿ ಆಯ್ಕೆ ವೇಳೆ ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ವೇಳೆ ಆತುರದ ನಿರ್ಧಾರ ತೆಗೆದುಕೊಂಡ್ರೆ ಯಡವಟ್ಟಾಗೋದು ನಿಶ್ಚಿತ.
ಆಚಾರ್ಯ ಚಾಣಕ್ಯ ಕೂಡ ಮದುವೆ, ವಧು, ವರರ ಆಯ್ಕೆ ಬಗ್ಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಮದುವೆಯಾಗುವ ಹುಡುಗ ಎಂಥ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಬಗ್ಗೆ ಚಾಣಕ್ಯ ಹೇಳಿದ್ದಾರೆ. ಚಾಣಕ್ಯನ ಪ್ರಕಾರ, ಪತ್ನಿಯಾಗಿ ಮನೆಗೆ ಬರುವವಳು ಸುಂದರವಾಗಿರಬೇಕಾಗಿಲ್ಲ. ಸೌಂದರ್ಯಕ್ಕಿಂತ ಬೇರೆ ವಿಷ್ಯಗಳನ್ನು ಹೆಚ್ಚು ಗಮನಿಸಬೇಕಂತೆ. ಸಂಸ್ಕಾರವುಳ್ಳ ಹಾಗೂ ಸದ್ಗುಣಶೀಲ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕಂತೆ. ಸೌಂದರ್ಯಕ್ಕಿಂತ ಸಂಸ್ಕಾರವುಳ್ಳ ಸ್ತ್ರೀ ಮನೆಗೆ ಬಂದಾಗ ಮನೆ ಸ್ವರ್ಗಕ್ಕೆ ಸಮನಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
ಅಸಂಸ್ಕಾರಿ, ಅಧರ್ಮಿ ಸ್ತ್ರೀ, ಗಂಡ ಹಾಗೂ ಗಂಡನ ಮನೆಯನ್ನು ನಾಶ ಮಾಡುತ್ತಾಳಂತೆ. ಇಂಥ ಸ್ತ್ರೀಯನ್ನು ಎಂದೂ ಮದುವೆಯಾಗಬಾರದು ಎಂದು ಚಾಣಕ್ಯ ಹೇಳಿದ್ದಾರೆ. ಇಂಥ ಮಹಿಳೆಯರ ಜೊತೆ ಎಚ್ಚರವಾಗಿ ನಡೆದುಕೊಳ್ಳಬೇಕು. ಅವ್ರು ಇಡೀ ಕುಟುಂಬವನ್ನು ನಾಶ ಮಾಡುತ್ತಾರಂತೆ.