ಆಚಾರ್ಯ ಚಾಣಕ್ಯ ಅನೇಕ ವಿಷಯದ ಬಗ್ಗೆ ಹೇಳಿದ್ದಾರೆ. ವ್ಯಕ್ತಿಯ ಜೀವನ, ವಿಶ್ವಾಸದ ಮೇಲೆ ನಡೆಯುತ್ತದೆ. ವ್ಯಕ್ತಿ ತನ್ನ ಸುತ್ತಮುತ್ತಲಿರುವ ಜನರು ಹಾಗೂ ಪರಿಸರದ ಮೇಲೆ ನಂಬಿಕೆ ಇಟ್ಟು ಜೀವನ ನಡೆಸುತ್ತಿದ್ದಾನೆ. ಆಚಾರ್ಯ ಚಾಣಕ್ಯ ಯಾರ ಮೇಲೆ ವಿಶ್ವಾಸವಿಡಬೇಕು, ಯಾರ ಮೇಲೆ ವಿಶ್ವಾಸವಿಡಬಾರದು ಎಂಬುದನ್ನು ತಮ್ಮ ನೀತಿಯಲ್ಲಿ ಹೇಳಿದ್ದಾರೆ.
ಆಚಾರ್ಯ ಚಾಣಕ್ಯ ಪ್ರಕಾರ ನದಿಯ ಮೇಲೆ ನಿರ್ಮಿಸಲಾಗಿರುವ ಸೇತುವೆ ಮೇಲೆ ಎಂದೂ ವಿಶ್ವಾಸವಿಡಬಾರದು. ಕೆಳಗಿರುವ ಸೇತುವೆಯನ್ನು ನಂಬಲೇಬಾರದು ಎನ್ನುತ್ತಾರೆ ಚಾಣಕ್ಯ. ಯಾವಾಗ ನದಿ ಹರಿವು ಹೆಚ್ಚಾಗುತ್ತೆ ಎಂಬುದು ಯಾರಿಗೂ ತಿಳಿದಿಲ್ಲ ಎನ್ನುತ್ತಾರೆ ಚಾಣಕ್ಯ.
ಶಸ್ತ್ರಾಸ್ತ್ರವುಳ್ಳವರನ್ನೂ ನಂಬಬಾರದು ಎನ್ನುತ್ತಾರೆ ಚಾಣಕ್ಯ.
ಕೈ ಉಗುರು ಹಾಗೂ ಕೊಂಬು ಹರಿತವಾಗಿರುವ ಪ್ರಾಣಿಗಳನ್ನು ನಂಬಿದವರು ಕಷ್ಟ ಎದುರಿಸಬೇಕಾಗುತ್ತದೆ.
ಚಂಚಲ ಸ್ವಭಾವದ ಸ್ತ್ರೀಯರನ್ನೂ ನಂಬಬಾರದು ಎನ್ನುತ್ತಾರೆ ಚಾಣಕ್ಯ.
ಸಾಹಸವನ್ನು ಇಷ್ಟಪಡುವ ವ್ಯಕ್ತಿಗಳ ಮೇಲೂ ವಿಶ್ವಾಸ ಬೇಡ.