ಮನುಷ್ಯ ಚಿತ್ರವಿಚಿತ್ರ ಹವ್ಯಾಸಗಳನ್ನು ಹೊಂದಿರುತ್ತಾನೆ. ಕೆಲವೊಂದು ಅಭ್ಯಾಸಗಳು ಕೆಟ್ಟವು ಎಂಬುದು ಗೊತ್ತಿದ್ದರೂ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ. ಕೆಲ ಅಭ್ಯಾಸಗಳು ಮನುಷ್ಯನ ದಿನಚರಿಯ ಒಂದು ಭಾಗವಾಗಿರುತ್ತವೆ.
ದೈನಂದಿನ ಜೀವನದಲ್ಲಿ ಅನೇಕರು ಸಂಖ್ಯೆಗೆ ಮಹತ್ವ ನೀಡುತ್ತಾರೆ. ಸಂಖ್ಯೆ ಮೇಲೆ ತಮ್ಮ ಕೆಲಸವನ್ನು ನಿರ್ಧರಿಸುತ್ತಾರೆ. ಒಳ್ಳೆ ಸಂಖ್ಯೆ, ಅಶುಭ ಸಂಖ್ಯೆ ನೋಡಿ ಕೆಲಸ ಮಾಡುತ್ತಾರೆ.
ನಿದ್ರೆಯಲ್ಲಿ ನಡೆಯುವುದು, ಮಾತನಾಡುವುದು ಅನೇಕರಿಗಿರುತ್ತದೆ. ಆದ್ರೆ ನಿದ್ರೆಯಲ್ಲಿ ವಾಹನ ಚಲಾಯಿಸುವವರಿದ್ದಾರೆ. ಇದು ಬಹಳ ಅಪಾಯಕಾರಿ. ನಿದ್ರೆಯಲ್ಲಿ ಏಳುವ ಜನರು ಕಾರನ್ನು ಚಲಾಯಿಸಿ ವಾಪಸ್ ಬಂದು ಹಾಸಿಗೆ ಮೇಲೆ ಮಲಗುತ್ತಾರೆ. ಅವರಿಗೆ ನಿದ್ರೆಯಲ್ಲಿ ಕಾರು ಚಲಾಯಿಸಿರುವುದು ಬೆಳಿಗ್ಗೆ ನೆನಪಿರುವುದಿಲ್ಲ.
ಉಗುರು ಕಚ್ಚುವ ಹವ್ಯಾಸ ಅನೇಕರಿಗಿರುತ್ತದೆ. ಸ್ವಲ್ಪ ಒತ್ತಡಕ್ಕೊಳಗಾದ್ರೂ ಅನೇಕರು ಉಗುರು ತಿನ್ನಲು ಶುರು ಮಾಡ್ತಾರೆ. ಇದು ಬಿಡಬೇಕೆಂದ್ರೂ ಬಿಡಲು ಕಷ್ಟವಾದ ಹವ್ಯಾಸಗಳಲ್ಲಿ ಒಂದು.
ಕೆಲವರು ವಾಸನೆ ತೆಗೆದುಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಉಗುರು, ಟವೆಲ್, ತಿಂಡಿ ಹೀಗೆ ಎಲ್ಲ ವಸ್ತುಗಳ ವಾಸನೆ ತೆಗೆದುಕೊಳ್ತಾರೆ. ಪುಸ್ತಕದ ವಾಸನೆ ಕೂಡ ತೆಗೆದುಕೊಳ್ತಾರೆ.
ಕೆಲವರಿಗೆ ಅವ್ರ ಕೂದಲಿನ ಮೇಲೆ ಹೆಚ್ಚು ಪ್ರೀತಿಯಿರುತ್ತದೆ. ಏನೇ ಮಾಡಿದ್ರೂ ಕೈ ನಿಲ್ಲುವುದಿಲ್ಲ. ಸದಾ ಕೂದಲಿನಲ್ಲಿ ಕೈ ಆಡಿಸುತ್ತಿರುತ್ತಾರೆ.
ಕೆಲವರು ಆಡಿತ ಮಾತನ್ನು ಮತ್ತೆ ಮತ್ತೆ ಹೇಳ್ತಾರೆ. ಆರಂಭದಲ್ಲಿ ಒಳ ಬಾಯಿಯಲ್ಲಿ ಹೇಳಿ ನಂತ್ರ ದೊಡ್ಡದಾಗಿ ಹೇಳುವವರಿದ್ದಾರೆ. ಮತ್ತೆ ಕೆಲವರು ಹೇಳಿದ ಮಾತನ್ನು ಮರೆತು ಮತ್ತೆ ಹೇಳುತ್ತಾರೆ.
ಕೆಲವರು ಮಲ-ಮೂತ್ರ ವಿಸರ್ಜನೆ ಮಾಡುವ ವೇಳೆ ಸಂಪೂರ್ಣ ಬೆತ್ತಲಾಗ್ತಾರೆ. ಇದು ವಿಚಿತ್ರವೆನಿಸಿದ್ರೂ ಸತ್ಯ. ಮೈ ಮೇಲೆ ಬಟ್ಟೆ ಧರಿಸದೆ ಮಲ-ಮೂತ್ರ ವಿಸರ್ಜನೆ ಮಾಡುವುದು ಅವರಿಗೆ ಇಷ್ಟವಾಗುತ್ತದೆ.