ವೀವರ್ ಸಿಂಡ್ರೋಮ್ ಒಂದು ಕಾಯಿಲೆ. ತಲೆಯ ಗಾತ್ರ ದೊಡ್ಡದಾಗಬಹುದು ಅಥವಾ ಎತ್ತರ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಬೌದ್ಧಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಖವು ಸಾಮಾನ್ಯಕ್ಕಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಹಿಗ್ಗಿದ ಕಣ್ಣುಗಳು, ದೊಡ್ಡ ಕಿವಿಗಳು, ಗುಳಿಬಿದ್ದ ಗಲ್ಲ, ಸಣ್ಣ ಕೆಳಗಿನ ದವಡೆ ಇವೆಲ್ಲ ಈ ಕಾಯಿಲೆಯ ಲಕ್ಷಣಗಳು. ವಂಶವಾಹಿಗಳು ರೂಪಾಂತರಗೊಂಡಾಗ ಈ ಆನುವಂಶಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ವಂಶವಾಹಿಯ ರೂಪಾಂತರವು ಉಂಟಾದಾಗ ಮೂಳೆಯು ವೇಗವಾಗಿ ಬೆಳೆಯುತ್ತದೆ ಮತ್ತು ವ್ಯಕ್ತಿಯು ಸಾಮಾನ್ಯಕ್ಕಿಂತ ಎತ್ತರವಾಗುತ್ತಾನೆ.ವೀವರ್ ಸಿಂಡ್ರೋಮ್ ಕಾರಣ ರುಮೆಸಾ ಗೆಲ್ಗಿ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಿಲ್ಲ. ನಡೆಯಲು ಗಾಲಿಕುರ್ಚಿ ಅಥವಾ ವಾಕಿಂಗ್ ಫ್ರೇಮ್ ಬಳಸಬೇಕು. ಅತಿಯಾದ ಎತ್ತರದಿಂದ ಆರಂಭದಲ್ಲಿ ರುಮೇಸಾ ಬೇಸರಗೊಂಡಿದ್ದರು. ಜನರು ಅವರನ್ನು ಗೇಲಿ ಮಾಡುತ್ತಿದ್ದರು. ಆದ್ರೀಗ ಎಲ್ಲವನ್ನೂ ಎದುರಿಸಿ ಬದುಕುವ ಛಲ ಅವರಲ್ಲಿ ಬಂದಿದೆ.