ಮಾರ್ಚ್ 12ರಿಂದ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದ 19 ಆಟಗಾರರ ತಂಡವನ್ನು ಬಿಸಿಸಿಐ ಸಿದ್ದಪಡಿಸಿದೆ. ಮಾರ್ಚ್ 12 ರಿಂದ ಮಾರ್ಚ್ 20 ರ ವರೆಗೆ ಅಹಮದಾಬಾದ್ ನಲ್ಲಿ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್, ರಾಹುಲ್ ತೆವಾಟಿಯಾ ಹಾಗೂ ಇಶನ್ ಕಿಶನ್ ಗೆ ಅವಕಾಶ ನೀಡಲಾಗಿದೆ.
ಮತ್ತೆ ಅಂಕೆಗೆ ಸಿಗದೇ ಭಾರಿ ಏರಿಕೆಯಾದ ಕೊರೋನಾ -1 ವಾರ ಲಾಕ್ಡೌನ್ ಘೋಷಿಸಿದ ಸರ್ಕಾರ
ಟಿ ಟ್ವೆಂಟಿ ಸರಣಿಗೆ ಭಾರತ ತಂಡ ಇಂತಿದೆ
ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅಕ್ಸರ್ ಪಟೇಲ್, ಕೆ.ಎಲ್. ರಾಹುಲ್, ರಾಹುಲ್ ತೆವಾಟಿಯಾ, ರಿಷಬ್ ಪಂತ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಭುವನೇಶ್ವರ್ ಕುಮಾರ್, ನಟರಾಜನ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಯಜುವೇಂದ್ರ ಚಹಾಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಹಾಗೂ ದೀಪಕ್ ಚಹರ್ ಸೇರಿದಂತೆ 19 ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.