ಈಗಿನ ಜಮಾನದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡದೇ ಇರುವವರ ಸಂಖ್ಯೆ ತುಂಬಾನೇ ಕಡಿಮೆ. ಸ್ಮಾರ್ಟ್ ಫೋನ್ಗಳಿಂದ ಲಾಭ ಎಷ್ಟಿದೆಯೋ ಇದು ಬ್ಲಾಸ್ಟ್ ಆಯ್ತು ಅಂದರೆ ಅಪಾಯ ಕೂಡ ಅಷ್ಟೇ ಇರುತ್ತೆ. ಹೀಗಾಗಿ ಯಾವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗಬಹುದು ಅನ್ನೋದನ್ನ ಅರಿತುಕೊಳ್ಳೋದು ಒಳ್ಳೆಯದು.
ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಲು ಎಲ್ಲಕ್ಕಿಂತ ಮುಖ್ಯ ಕಾರಣ ಬ್ಯಾಟರಿ ಸಿಕ್ಕಾಪಟ್ಟೆ ಬಿಸಿ ಆಗೋದ್ರಿಂದ. ಸಾಮಾನ್ಯವಾಗಿ ನಾವು ಮೊಬೈಲ್ ಚಾರ್ಜಿಂಗ್ಗೆ ಹಾಕಿದ ಬಳಿಕ ಮರೆತು ಬಿಡುತ್ತೇವೆ. ಚಾರ್ಜ್ ಮಾಡುವ ವೇಳೆ ಮೊಬೈಲ್ ವಿದ್ಯುತ್ ಸಂಪರ್ಕದಲ್ಲಿ ಇರುತ್ತೆ. ಇದರಿಂದ ಬ್ಯಾಟರಿ ಹೆಚ್ಚೆಚ್ಚು ಬಿಸಿಯಾಗುತ್ತೆ. ಈ ಸಂದರ್ಭದಲ್ಲಿ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚು.
ಬೇರೆ ಬೇರೆ ಚಾರ್ಜರ್ಗಳನ್ನ ಬಳಕೆ ಮಾಡೋದು ಕೂಡ ಮೊಬೈಲ್ ಬ್ಲಾಸ್ಟ್ ಆಗಲು ಇನ್ನೊಂದು ಮುಖ್ಯ ಕಾರಣವಾಗಿದೆ. ಸಾಮಾನ್ಯವಾಗಿ ನಾವು ಒರಿಜಿನಲ್ ಚಾರ್ಜರ್ ಹಾಳಾದ ಬಳಿಕ ಯಾವುದಾದರೂ ಲೋಕಲ್ ಚಾರ್ಜರ್ನ್ನು ಖರೀದಿ ಮಾಡಿಬಿಡ್ತೇವೆ. ಇದರಿಂದ ಬ್ಯಾಟರಿ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತೆ.
ಅನೇಕ ಬಾರಿ ಮೊಬೈಲ್ ಬ್ಯಾಟರಿ ಹಾಳಾಗಿ ಬಿಡುತ್ತೆ. ಇಂತಹ ಸಂದರ್ಭಗಳಲ್ಲಿ ಹಣ ಉಳಿಕೆ ಮಾಡುವ ಸಲುವಾಗಿ ನಾವು ಕಡಿಮೆ ಬೆಲೆಯ ಬ್ಯಾಟರಿಗಳನ್ನ ಅಳವಡಿಸುತ್ತೇವೆ. ಇಂತಹ ಬ್ಯಾಟರಿಗಳು ಚಾರ್ಜ್ ಮಾಡುತ್ತಿದ್ದಂತೆಯೇ ಹಾಳಾಗಿ ಬಿಡುತ್ತೆ. ಇಲ್ಲವೇ ಬ್ಲಾಸ್ಟ್ ಆಗುತ್ತದೆ.
ಸ್ಮಾರ್ಟ್ ಫೋನ್ಗಳಲ್ಲಿ ಅಳವಡಿಸಲಾಗುವ ಬ್ಯಾಟರಿಗಳನ್ನ ಲೀಥಿಯಂನಿಂದ ಮಾಡಲಾಗುತ್ತೆ. ಹೀಗಾಗಿ ಇವು ತುಂಬಾನೇ ಸೂಕ್ಷ್ಮವಾಗಿ ಇರುತ್ತೆ. ಹೀಗಾಗಿ ಮೊಬೈಲ್ ತುಂಬ ಮೇಲಿನಿಂದ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಬಹುದು.