ದುಬೈನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಯುಎಇ 2022 ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಜಾಗತಿಕ ದಕ್ಷಿಣಕ್ಕೆ ಭಾರತವು ಒಂದು ಅವಕಾಶವನ್ನು ಸಂಗ್ರಹಿಸಿದೆ ಎಂದಿದ್ದಾರೆ.
ಒಂದು ಅರ್ಥದಲ್ಲಿ ಹಿಂದುಳಿದಿರುವ ಅಥವಾ ಇತರ ಮುಂದುವರಿದ ರಾಷ್ಟ್ರಗಳು ಡಿಜಿಟಲೀಕರಣವನ್ನು ಪಡೆಯಲು ಸಾಧ್ಯವಾಗದ ದೇಶಗಳಿಗೆ, ಡಿಜಿಟಲೀಕರಣದ ಏಣಿಯನ್ನು ವೇಗವಾಗಿ ಏರಲು ಅವರಿಗೆ ಭಾರತವು ಅವಕಾಶವನ್ನು ನೀಡುತ್ತದೆ. ಇದುವರೆಗೆ ತಂತ್ರಜ್ಞಾನದದಿಂದ ದೂರವಿರುವ ದೇಶಗಳಿಗೆ ಡಿಜಟಲೀಕರಣದ ಪ್ರಯೋಜನಗಳನ್ನು ಸರ್ಕಾರಗಳು ನಾಗರಿಕರಿಗೆ ತಲುಪಿಸಲು ಭಾರತವು ಮೊದಲ ಬಾರಿಗೆ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದರು.
ಇಂಡಿಯಾ ಸ್ಟಾಕ್ ಅನ್ನು ಭಾರತದಲ್ಲಿ ಉತ್ತಮವಾಗಿ ಪರೀಕ್ಷಿಸಲಾಗಿದೆ. ಡಿಜಿಟಲೀಕರಣದ ಪರಿಧಿಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಭಾರತೀಯನನ್ನು ನಾವು ಮುಖ್ಯವಾಹಿನಿಗೆ ತಂದಿದ್ದೇವೆ. ಅವರು ಸಬಲರಾಗಿದ್ದಾರೆ ಮತ್ತು ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಭಾರತ-ಯುಎಇ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತನಾಡಿದ ಅವರು, ನಾವು UAE ಮತ್ತು ಭಾರತದ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ಗಳ ನಡುವೆ ನಾವೀನ್ಯತೆ ಮತ್ತು ಡೇಟಾ ಹರಿಯಲು ಕಾರಿಡಾರ್ಗಳನ್ನು ರಚಿಸುತ್ತೇವೆ. ಗ್ರಾಹಕ ತಂತ್ರಜ್ಞಾನದಾದ್ಯಂತ ಸೆಮಿಕಂಡಕ್ಟರ್ಗಳು, ಎಲೆಕ್ಟ್ರಾನಿಕ್ಸ್, AI, ಬ್ಲಾಕ್ಚೈನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ನಾವು ಯುಎಇಯೊಂದಿಗೆ ಸಹ-ಅಭಿವೃದ್ಧಿ ಮಾದರಿಗಳನ್ನು ರಚಿಸುತ್ತೇವೆ ಎಂದರು.