alex Certify ಇಂಡಿಯನ್‌ ಅಥವಾ ವೆಸ್ಟರ್ನ್‌ ಟಾಯ್ಲೆಟ್‌ ಗಳಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ತಜ್ಞರ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಯನ್‌ ಅಥವಾ ವೆಸ್ಟರ್ನ್‌ ಟಾಯ್ಲೆಟ್‌ ಗಳಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ತಜ್ಞರ ಟಿಪ್ಸ್

ಸದ್ಯ ಬಹುತೇಕ ಮನೆಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಬಳಕೆ ಹೆಚ್ಚಾಗ್ತಿದೆ. ವೆಸ್ಟರ್ನ್‌ ಟಾಯ್ಲೆಟ್‌ನಿಂದ ಅನೇಕ ರೀತಿಯ ಅನುಕೂಲಗಳಿವೆ. ವಿಶೇಷವಾಗಿ ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಆರಾಮದಾಯಕವಾಗಿದೆ. ಇಂಡಿಯನ್‌ ಶೌಚಾಲಯದಲ್ಲಿ ಕಾಲು ಮಡಿಸಿಕೊಂಡು ಕುಳಿತುಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ. ಆದರೆ ಆರೋಗ್ಯವಂತ ಜನರು ಸಹ ವೆಸ್ಟರ್ನ್‌ ಟಾಯ್ಲೆಟ್‌ ಅನ್ನೇ ಬಳಸುತ್ತಾರೆ. ಬಹುತೇಕ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೆಸ್ಟರ್ನ್‌ ಟಾಯ್ಲೆಟ್‌ ಹೆಚ್ಚಾಗಿದೆ.

ಮನೆಯಲ್ಲಿ ಟಾಯ್ಲೆಟ್ ಸೀಟ್ ಅಳವಡಿಸುವಾಗ ಯಾವ ಕಮೋಡ್ ಅಳವಡಿಸಬೇಕು ಎಂಬ ಪ್ರಶ್ನೆ ಏಳುವುದು ಸಹಜ. ವಿಶ್ವ ಟಾಯ್ಲೆಟ್‌ ದಿನವಾದ ಇಂದು, ಈ ಬಗ್ಗೆ ತಜ್ಞರು ಏನ್ಹೇಳ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿ ಇಂಡಿಯನ್‌ ಶೌಚಾಲಯವನ್ನು ಬಳಸಿದಾಗ, ಆತನ  ಕಾಲ್ಬೆರಳುಗಳಿಂದ ತಲೆಯವರೆಗೆ ಇಡೀ ದೇಹವು ಒತ್ತಡವನ್ನು ಅನುಭವಿಸುತ್ತದೆ ಎಂಬುದು ಸಂಶೋಧನೆಯಲ್ಲಿ ಕಂಡುಬಂದಿದೆ.  ಆದರೆ ವೆಸ್ಟರ್ನ್‌ ಟಾಯ್ಲೆಟ್‌ ಆರಾಮದಾಯಕವಾದ ಸೌಲಭ್ಯಗಳನ್ನು ಹೊಂದಿದೆ. ಇದರಿಂದಾಗಿ ಟಾಯ್ಲೆಟ್‌ ಬಳಸುವ ವೇಳೆ ಯಾವುದೇ ರೀತಿಯ ಸಂವೇದನೆಗಳಿರುವುದಿಲ್ಲ. ಪರಿಣಾಮ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುತ್ತಾನೆ.

ಇಂಡಿಯನ್‌ ಟಾಯ್ಲೆಟ್‌ನಲ್ಲಿ ಕುಳಿತರೆ ಹೊಟ್ಟೆ ಕ್ಲೀನ್‌ ಆಗಲು 3 ರಿಂದ 3.5 ನಿಮಿಷ ಬೇಕು. ಆದ್ರೆ ವೆಸ್ಟರ್ನ್‌ ಟಾಯ್ಲೆಟ್‌ನಲ್ಲಿ ಕುಳಿತಾಗ ಸರಿಯಾಗಿ ಒತ್ತಡ ಬಾರದೇ ಶೌಚಕ್ಕೆ ಕಡಿಮೆ ಅಂದ್ರೂ 5 ರಿಂದ 7 ನಿಮಿಷ ಬೇಕಾಗುತ್ತದೆ. ಇಷ್ಟು ಹೊತ್ತು ಕುಳಿತರೂ ಹೊಟ್ಟೆ ಪೂರ್ತಿಯಾಗಿ ಸ್ವಚ್ಛವಾಗುವುದಿಲ್ಲ. ಇಂಡಿಯನ್‌ ಟಾಯ್ಲೆಟ್‌ ಬಳಸಿದಾಗ ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬಿದ್ದು, ಬೇಗನೆ ಗಟ್‌ ಕ್ಲೀನಿಂಗ್‌ ಪ್ರಕ್ರಿಯೆ ಮುಗಿಯುತ್ತದೆ.

ಇಂಡಿಯನ್‌ ಟಾಯ್ಲೆಟ್‌ಗೆ ಹೋಲಿಸಿದರೆ ವೆಸ್ಟರ್ನ್‌ ಟಾಯ್ಲೆಟ್‌ನಲ್ಲಿ ಕೂರುವುದರಿಂದ ಸೋಂಕಿನ ಅಪಾಯ ಹೆಚ್ಚು. ಇದು ಭೇದಿ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಏಕೆಂದರೆ ನಾವು ವೆಸ್ಟರ್ನ್‌ ಟಾಯ್ಲೆಟ್‌ ಸೀಟ್‌ ಮೇಲೆ ಕುಳಿತುಕೊಳ್ಳುತ್ತೇವೆ, ಟಾಯ್ಲೆಟ್ ಸೀಟ್ ನಮ್ಮ ಚರ್ಮದ ಸಂಪರ್ಕಕ್ಕೆ ಬರುತ್ತದೆ. ಚರ್ಮದ ಸಂಪರ್ಕದಿಂದಾಗಿ ಸೂಕ್ಷ್ಮಜೀವಿಗಳು ನಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುತ್ತವೆ.

ಇಂಡಿಯನ್‌ ಟಾಯ್ಲೆಟ್‌ ಗರ್ಭಿಣಿಯರಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಸಾಮಾನ್ಯ ಹೆರಿಗೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಗರ್ಭಿಣಿಯರಿಗೆ ಮಲಬದ್ಧತೆಯ ಸಮಸ್ಯೆಯೂ ಆಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...