alex Certify ಇಂಡಿಗೋ ಏರ್‌ಲೈನ್ಸ್‌ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಆಫರ್‌, ಟಿಕೆಟ್‌ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಗೋ ಏರ್‌ಲೈನ್ಸ್‌ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಆಫರ್‌, ಟಿಕೆಟ್‌ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…..!

ಭಾರತ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲೊಂದಾದ ʼಇಂಡಿಗೋ ಏರ್‌ಲೈನ್ಸ್‌ʼ 16ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಎಲ್ಲಾ ದೇಶೀಯ ವಿಮಾನ ಪ್ರಯಾಣಿಕರಿಗಾಗಿ ‘ಸ್ವೀಟ್ 16’ ಹೆಸರಿನಲ್ಲಿ ವಾರ್ಷಿಕೋತ್ಸವದ ಕೊಡುಗೆಯನ್ನು ಘೋಷಿಸಿದೆ. 16 ವರ್ಷಗಳ ವಿಮಾನಯಾನ ಸೇವೆಯ ನೆನಪಿಗಾಗಿ ಈ ಆಫರ್‌ ನೀಡಲಾಗ್ತಿದೆ.

ಆಗಸ್ಟ್ 3 ರಿಂದ 5ರವರೆಗೆ ಪ್ರಯಾಣಿಕರು ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ರಿಯಾಯಿತಿ ದರದಲ್ಲಿ ನೀವು ಕೊಂಡುಕೊಂಡ ವಿಮಾನ ಟಿಕೆಟ್‌ಗಳು 2022ರ ಆಗಸ್ಟ್ 18 ರಿಂದ 2023 ರ ಜುಲೈ 16 ರವರೆಗೂ  ಪ್ರಯಾಣಕ್ಕೆ ಮಾನ್ಯವಾಗಿರುತ್ತವೆ. ವಿಮಾನಯಾನ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊಡುಗೆಗಳನ್ನು ಪ್ರಕಟಿಸಿದೆ.

ಈ ಆಫರ್‌ ಅಡಿಯಲ್ಲಿ ಇಂಡಿಗೋ ವಿಮಾನದ ಟಿಕೆಟ್‌ ಬೆಲೆ ಕೇವಲ 1,616 ರೂಪಾಯಿಯಿಂದ ಆರಂಭ. ನಿರ್ಗಮನದ ದಿನಾಂಕಕ್ಕಿಂತ ಕನಿಷ್ಠ 15 ದಿನಗಳ ಮೊದಲು ಫ್ಲೈಟ್‌ಗಳಿಗಾಗಿ ಆಫರ್ ಅವಧಿಯಲ್ಲಿ ಮಾಡಿದ ಬುಕಿಂಗ್‌ಗಳಿಗೆ ಆಫರ್ ಮಾನ್ಯವಾಗಿರುತ್ತದೆ. ಪ್ರಯಾಣದ ದಿನಾಂಕವು ಆಗಸ್ಟ್ 18, 2022 ಕ್ಕಿಂತ ಮುಂಚಿತವಾಗಿರಬಾರದು ಮತ್ತು ಜುಲೈ 16, 2023 ರ ನಂತರವೂ ಪ್ರಯಾಣ ಮಾಡುವಂತಿಲ್ಲ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.

ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡುವ ಪ್ರಯಾಣಿಕರಿಗೆ ಈ ಆಫರ್‌ನಿಂದ ಲಾಭವಾಗಲಿದೆ. ದರಗಳು 1,616 ರಿಂದ ಪ್ರಾರಂಭವಾಗಲಿದ್ದು, ಏರ್‌ಲೈನ್ ಕಾರ್ಡ್‌ಗಳ ಮೇಲೆ 1,000 ರಿವಾರ್ಡ್ ಪಾಯಿಂಟ್‌ಗಳಿಗೆ ಬದಲಾಗಿ ಶೇಕಡಾ 25ರಷ್ಟು ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಸಹ ಕೊಡಲಾಗುತ್ತಿದೆ. ಗ್ರಾಹಕರು ತಮ್ಮ HSBC ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಬುಕ್ ಮಾಡಬಹುದು ಮತ್ತು ಕನಿಷ್ಠ 3,500 ರೂಪಾಯಿಗಳ ವಹಿವಾಟಿನ ಮೇಲೆ 800 ರೂಪಾಯಿಗಳವರೆಗೆ ಶೇ.5ರಷ್ಟು ಕ್ಯಾಶ್‌ಬ್ಯಾಕ್  ಪಡೆಯಬಹುದು.

ಇದು Mweb, Mobile ಮತ್ತು IndiGo ವೆಬ್‌ಸೈಟ್‌ಗಳಲ್ಲಿ ಮಾತ್ರ ಲಭ್ಯವಿದೆ. ಇಂಡಿಗೋ ದೇಶದಲ್ಲಿ 280ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ದಿನಕ್ಕೆ 1,600 ಕ್ಕೂ ಹೆಚ್ಚು ವಿಮಾನಗಳೊಂದಿಗೆ 74 ದೇಶೀಯ ಮತ್ತು 25 ಅಂತರರಾಷ್ಟ್ರೀಯ ತಾಣಗಳನ್ನು ಸಂಪರ್ಕಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...