alex Certify ಇಂಟರ್ನೆಟ್‌ ಬಳಕೆಯಲ್ಲಿ ಮುಂದಿದ್ದಾರೆ ಭಾರತದ ಮಹಿಳೆಯರು; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್‌ ಬಳಕೆಯಲ್ಲಿ ಮುಂದಿದ್ದಾರೆ ಭಾರತದ ಮಹಿಳೆಯರು; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೇವಲ ನಗರಗಳು ಮಾತ್ರವಲ್ಲ ಹಳ್ಳಿ ಹಳ್ಳಿಗೂ ಈಗ ಇಂಟರ್ನೆಟ್‌ ಸಂಪರ್ಕವಿದೆ. ಮಹಿಳೆಯರು ಕೂಡ ಇಂಟರ್ನೆಟ್‌ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ 10 ರಲ್ಲಿ 8 ಮಹಿಳೆಯರು ಇಂಟರ್ನೆಟ್‌ ಬಳಸುತ್ತಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಆನ್‌ಲೈನ್ ನಿಂದನೆ, ಕಿರುಕುಳ, ಟ್ರೋಲಿಂಗ್ ಮತ್ತು ವಂಚನೆಯನ್ನು ಎದುರಿಸುತ್ತಿದ್ದಾರೆ.  ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.83ರಷ್ಟು ಮಹಿಳೆಯರು ಇಂಟರ್ನೆಟ್ ಅನ್ನು ಬಳಸುತ್ತಿದ್ದು, ಅದನ್ನು ಸುರಕ್ಷಿತವಾಗಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಮಹಿಳೆಯರ ಕುಂದು ಕೊರತೆಗಳನ್ನು ಆಲಿಸಲು ಮಹಿಳಾ ಸೈಬರ್  ಹಾಟ್‌ಲೈನ್ ಅನ್ನು ಪ್ರಾರಂಭಿಸಬೇಕೆಂದು ಶೇ.42ರಷ್ಟು ಬಳಕೆದಾರರು ಒತ್ತಾಯಿಸಿದ್ದಾರೆ. ಇದನ್ನು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯಗೊಳಿಸಬೇಕು ಮತ್ತು ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಕಡ್ಡಾಯ ಕ್ರಮ ಆಗಬೇಕೆಂಬ ಆಗ್ರಹವೂ ಕೇಳಿ ಬಂದಿದೆ.  ಮಹಿಳೆಯರು ಇಂಟರ್ನೆಟ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತು ಭಾರತದ ನಗರ ಪ್ರದೇಶದಲ್ಲಿ ವಿವರಗಳನ್ನು ಸಂಗ್ರಹಿಸಲಾಗಿದೆ.

ಸಮೀಕ್ಷೆಗೆ ಒಳಗಾದವರಲ್ಲಿ 76 ಪ್ರತಿಶತ ಜನರು “ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು” ಇಂಟರ್ನೆಟ್ ಬಳಸುತ್ತಾರೆ ಎಂದು ಹೇಳಿದ್ದಾರೆ. ಸಮೀಕ್ಷೆಯ ಡೇಟಾಗಳ ಪ್ರಕಾರ, ಶೇ.57ರಷ್ಟು ಜನರು ಮಾಹಿತಿಯನ್ನು ಹುಡುಕಲು ಇಂಟರ್ನೆಟ್ ಅನ್ನು ಬಳಸಿದ್ದಾರೆ. 57 ಪ್ರತಿಶತದಷ್ಟು ಮಂದಿ ಸಿನೆಮಾ, ಸಂಗೀತ ಸೇರಿದಂತೆ ಆನ್‌ಲೈನ್‌ ಮನರಂಜನೆಗಾಗಿ ಸಾಧನಗಳನ್ನು ಬಳಸುತ್ತಾರೆ. ಶೇ. 46ರಷ್ಟು ಜನರು ಆನ್‌ಲೈನ್ ಶಾಪಿಂಗ್‌ಗಾಗಿ ಸಾಧನವನ್ನು ಬಳಸುತ್ತಾರೆ.

35 ಪ್ರತಿಶತದಷ್ಟು ಜನರು ವಿವಿಧ ಟಿಕೆಟ್‌ಗಳು/ಸೇವೆಗಳಿಗೆ ಬುಕಿಂಗ್ ಅಥವಾ ಪಾವತಿಸಲು ಇದನ್ನು ಬಳಸುತ್ತಾರೆ. ಶೇ.19ರಷ್ಟು ಮಂದಿ ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಇನ್ನು ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ಶೇ.14ರಷ್ಟು ಮತ್ತು ಇತರ ಕಾರಣಗಳಿಗಾಗಿ ಶೇ.5ರಷ್ಟು ಜನರು ಇಂಟರ್ನೆಟ್‌ ಬಳಕೆ ಮಾಡುತ್ತಿದ್ದಾರೆ.

ಪ್ರಸ್ತುತ 2019 ರಲ್ಲಿ ಪ್ರಾರಂಭಿಸಲಾದ ಪರಿಷ್ಕೃತ ಸೈಬರ್ ಅಪರಾಧದ ಪೋರ್ಟಲ್, ಮಕ್ಕಳು ಮತ್ತು ಮಹಿಳೆಯರ ಮೇಲೆ ವಿಶೇಷ ಗಮನ ನೀಡುತ್ತಿದೆ ಎಂಬ ಅಂಶ ಕೂಡ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಸರ್ಕಾರ, ಸೈಬರ್-ಕ್ರೈಮ್ ಬ್ರಾಂಚ್ ಮತ್ತು ನಿಯಂತ್ರಕ ಪ್ರತಿವಾದಿಗಳ ಧ್ವನಿಗೆ ಕಿವಿಗೊಡಬೇಕು. ಏಕೆಂದರೆ ಸೈಬರ್ ದೂರು ದಾಖಲಾದಾಗ ಸಮಯೋಚಿತ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸುವ ರಾಷ್ಟ್ರೀಯ ಹಾಟ್‌ಲೈನ್ ಅಗತ್ಯವಿದೆ.

ಗೃಹ ಸಚಿವಾಲಯವು ರಚಿಸಿದ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ಈ ಅಂಶವನ್ನು ಗಮನಿಸಿದೆ. ಇದುವರೆಗೆ 13,000 ಪೊಲೀಸ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧ ಜಾಗೃತಿ, ತನಿಖೆ ಮತ್ತು ಫೋರೆನ್ಸಿಕ್ಸ್ ಕುರಿತು ತರಬೇತಿ ನೀಡಲಾಗಿದೆ. ದುರದೃಷ್ಟವಶಾತ್, ಇಲ್ಲಿಯವರೆಗೆ ಅನೇಕ ರಾಜ್ಯಗಳು ಈ ಉದ್ದೇಶಕ್ಕಾಗಿ ಇಲಾಖೆಗಳನ್ನು ಹೊಂದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...