ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಫಲಿತಾಂಶದ ವೇಳೆ ಮಹಾ ಎಡವಟ್ಟು ಮಾಡಿದ್ದು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರಿಷ್ಠ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ನೀಡಿ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದೆ. 100ಕ್ಕೆ 102, 103, 108 ಅಂಕಗಳನ್ನು ವಿಟಿಯು ನೀಡಿದ್ದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ.
BIG NEWS: JDSಗೆ ಮತ್ತೊಂದು ಆಘಾತ…..? ಪಕ್ಷದ ವಾಟ್ಸಪ್ ಗ್ರೂಪ್ ನಿಂದ ಶಾಸಕ ಶಿವಲಿಂಗೇಗೌಡ ಎಕ್ಸಿಟ್
ಏಪ್ರಿಲ್, ಮೇ ತಿಂಗಳಿನಲ್ಲಿ ನಡೆದಿದ್ದ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಈ ಅವಾಂತರ ಸಂಭವಿಸಿದೆ. ಕೆಲ ವಿಷಯಗಳ ಇಂಜಿನಿಯರಿಂಗ ಪರೀಕ್ಷೆ ಫಲಿತಾಂಶ ಅಪ್ ಲೋಡ್ ಮಾಡುವಾಗ ಎಡವಟ್ಟಾಗಿದ್ದು, ಗರಿಷ್ಠ ಅಂಕಕ್ಕಿಂತ ಹೆಚ್ಚು ಅಂಕ ನೀಡಿರುವುದು ಕಂಡುಬಂದಿದೆ.