ಇಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತದೆ ಎಂಬ ಗಾದೆ ಮಾತಿದೆ. ಇಂಗು ಬಳಸಿದರೆ ಅಡುಗೆಯ ರುಚಿ ಹೆಚ್ಚಾಗುತ್ತದೆ. ಹಾಗೇ ದೇಹದ ಕಾಯಿಲೆಗಳಿಗೆ ಇಂಗು ಮನೆ ಮದ್ದಾಗಿದೆ. ಹೀಗಾಗಿ ಅಡುಗೆಯಲ್ಲಿ ಇದನ್ನು ಬಳಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಇಂಗಿನ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ.
* ಇಂಗು ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಉಬ್ಬರದ ಸಮಸ್ಯೆ ಇದ್ದರೆ ಬೆಚ್ಚಗಿನ ನೀರಿನಲ್ಲಿ ಇಂಗು ಬೆರೆಸಿದ ನೀರನ್ನು ಕುಡಿದರೆ ಬೇಗನೆ ಮಾಯವಾಗುತ್ತದೆ.
* ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಇದು ಹೊಂದಿದೆ.
* ಉಸಿರಾಟದ ತೊಂದರೆ ಬಂದಾಗ ಕೂಡ ಸ್ವಲ್ಪ ಇಂಗನ್ನು ತಿಂದರೆ ಅಥವಾ ಬಿಸಿನೀರಿನಲ್ಲಿ ಕುಡಿದರೆ ಉಸಿರಾಟದ ತೊಂದರೆಯನ್ನು ಹೋಗಲಾಡಿಸಿ ಕೊಳ್ಳಬಹುದು.
* ಬಿಸಿ ನೀರಿಗೆ ಸ್ವಲ್ಪ ಹಸಿ ಶುಂಠಿ, ಜೇನು, ಇಂಗನ್ನು ಬೆರೆಸಿ ಕುಡಿದರೆ ನಾಯಿ ಕೆಮ್ಮನ್ನು ತಡೆಗಟ್ಟಬಹುದು.
* ಚಿಕ್ಕ ಮಕ್ಕಳಿಗೆ ಗಂಟಲು ಕಟ್ಟಿಕೊಂಡು ಕಫ ಹೆಚ್ಚಾದಾಗ ಸ್ವಲ್ಪ ಇಂಗು ತಿನ್ನಿಸಿದರೆ ಗುಣವಾಗುತ್ತದೆ.
* ಮಾದಕ ವಸ್ತು ಸೇವನೆ ಮಾಡುವವರನ್ನು ಹೊರತರುವ ಶಕ್ತಿ ಇಂಗಿಗಿದೆ.