ಡಿಜಿಟಲ್ ಪಾವತಿ ವ್ಯವಸ್ಥೆ ಕುರಿತಂತೆ ಈಗಾಗಲೇ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ದೇಶದ ಎಲ್ಲ ಪಂಚಾಯಿತಿಗಳು ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಂಡು ಯುಪಿಐ ಸಕ್ರಿಯ ಪಂಚಾಯಿತಿಗಳಾಗಿ ಬದಲಾಗಬೇಕು ಎಂದು ಆದೇಶಿಸಲಾಗಿದೆ.
ಇದಕ್ಕಾಗಿ ಸ್ವಾತಂತ್ರೋತ್ಸವದ ಆಗಸ್ಟ್ 15ರ ಗಡುವು ವಿಧಿಸಲಾಗಿದ್ದು, ಪಂಚಾಯಿತಿಗಳು ಹಣ ಪಾವತಿ ಮತ್ತು ಸ್ವೀಕೃತಿಯನ್ನು ಯುಪಿಐ ಮೂಲಕವೇ ನಡೆಸಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ ಈ ಕುರಿತಂತೆ ಪಂಚಾಯತ್ ರಾಜ್ ಸಚಿವಾಲಯ ಅಧಿಕೃತ ಆದೇಶವನ್ನು ಹೊರಡಿಸಿದೆ.
ದೇಶದ ಶೇಕಡ 98 ಪಂಚಾಯಿತಿಗಳು ಪ್ರಸ್ತುತ ಯುಪಿಐ ಆಧಾರಿತ ಪಾವತಿ ಬಳಕೆಯನ್ನು ಆರಂಭಿಸಿದ್ದು, ಒಂದೂವರೆ ಲಕ್ಷ ಕೋಟಿ ರೂಪಾಯಿ ಪಾವತಿ ವ್ಯವಹಾರವನ್ನು ಈ ಮೂಲಕವೇ ನಡೆಸಿವೆ. ಅಲ್ಲದೆ ಪಂಚಾಯಿತಿಗಳಿಗೆ ಪಾವತಿಗಳನ್ನು ಸಹ ಯುಪಿಐ ಮೂಲಕವೇ ಮಾಡಲಾಗುತ್ತಿದೆ. ಹೀಗಾಗಿ ಚೆಕ್ ಅಥವಾ ನಗದು ವ್ಯವಹಾರ ಬಹುತೇಕ ಸ್ಥಗಿತಗೊಂಡಿದೆ.