
ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೆ ಹಾಸನ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಭೂ ಸೇನಾ ರ್ಯಾಲಿ ನಡೆಯಲಿದ್ದು, ಈ ವೇಳೆ ‘ಅಗ್ನಿಪಥ’ ಯೋಜನೆಯಡಿ ‘ಅಗ್ನಿವೀರ’ ರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಜನರಲ್ ಡ್ಯೂಟಿ, ಅಗ್ನಿವೀರ ತಾಂತ್ರಿಕ ನೇಮಕಾತಿ ಜೊತೆಗೆ 8ನೇ ತರಗತಿ ಮತ್ತು 10ನೇ ತರಗತಿ ಉತ್ತೀರ್ಣವಾಗಿರುವವರಿಗೆ ಅಗ್ನಿವೀರ ಕುಶಲಕರ್ಮಿ, ಅಗ್ನಿವೀರ ಕ್ಲರ್ಕ್ ಮತ್ತು ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಆನ್ಲೈನ್ ಮೂಲಕ ನೋಂದಣಿ ಕಡ್ಡಾಯವಾಗಿದ್ದು, ಜುಲೈ 1ರಿಂದ ಜುಲೈ 30ರವರೆಗೆ https//joinindianarmy.nic.in ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಡ್ಮಿಟ್ ಕಾರ್ಡ್ ಗಳನ್ನು ನೋಂದಣಿ ವೇಳೆ ನೀಡಲಾದ ಇಮೇಲ್ ವಿಳಾಸಕ್ಕೆ ಆಗಸ್ಟ್ 1ರಿಂದ ಆಗಸ್ಟ್ 7ರ ಮಧ್ಯೆ ಕಳುಹಿಸಿಕೊಡಲಾಗುತ್ತದೆ.